ಕನ್ನಡದ ಗಜ ಸಿನಿಮಾದ ನಟಿ ನವ್ಯಾ ನಾಯರ್ ಗೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.1.1 ಲಕ್ಷ ದಂಡ ವಿಧಿಸಿದೆ.
ಮಲ್ಲಿಗೆ ಹೂಗಳನ್ನು ಕೊಂಡೊಯ್ದಿದ್ದಕ್ಕಾಗಿ ನಟಿ ನವ್ಯಾ ನಾಯರ್ ಅವರಿಗೆ ಸುಮಾರು 1.14 ಲಕ್ಷ (AUD 1,980) ದಂಡ ವಿಧಿಸಲಾಗಿದೆ.
ವಿಕ್ಟೋರಿಯಾದಲ್ಲಿ ಮಲಯಾಳಿ ಅಸೋಸಿಯೇಷನ್ನ ಓಣಂ ಆಚರಣೆಯಲ್ಲಿ ನಾನು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಹೂವುಗಳನ್ನು ಧರಿಸಿದ್ದೆ ಎಂದು ನವ್ಯಾ ತಮಾಷೆ ಮಾಡಿದ್ದು,ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾಗಾದರೆ ನಡೆದಿದ್ದಾದರೂ ಏನು ?
ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಡುವ ಮೊದಲು ತನ್ನ ತಂದೆ ಉಡುಗೊರೆಯಾಗಿ ನೀಡಿದ 15 ಸೆಂ.ಮೀ ಉದ್ದದ ಮಲ್ಲಿಗೆ ಹೂವಿನ ಹಾರವನ್ನು ತೆಗೆದುಕೊಂಡು ಹೋಗಿದ್ದೆ.ನನಗೆ ಆ ದೇಶದ ನಿಯಮ ತಿಳಿದಿರಲಿಲ್ಲ. ವಿದೇಶಿ ಸಸ್ಯಗಳು ಅಥವಾ ಪ್ರಾಣಿಗಳನ್ನು ಆ ದೇಶಕ್ಕೆ ಕೊಂಡೊಯ್ಯುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಸ್ಥಳೀಯ ಪ್ರಭೇದಗಳಿಗೆ ಅಪಾಯವನ್ನುಂಟುಮಾಡುತ್ತದೆ. ನನಗೆ ಇದು ತಿಳಿಯದೆ ಹೂವು ತೆಗೆದುಕೊಂಡ ಹೋಗಿದ್ದೆ ಹಾಗಾಗಿ ದಂಡ ಪಾವತಿಸಬೇಕಾಯಿತು ಎಂದು ನಟಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ನಿಯಮದ ಪ್ರಕಾರ ವಿದೇಶದಿಂದ ಆಗಮಿಸುವ ವ್ಯಕ್ತಿಗಳು ಯಾವುದೇ ರೀತಿಯ ಹೂವು, ಸಸ್ಯಗಳು, ಗಿಡ, ಎಲೆಗಳನ್ನು ತರುವುದಿದ್ದರೇ ಮೊದಲೇ ಮಾಹಿತಿ ನೀಡಬೇಕು. ಈ ಕುರಿತು ಡಿಕ್ಲರೇಶನ್ ನೀಡಬೇಕು. ಹೀಗೆ ಮಾಡದಿದ್ದರೆ ನಿಯಮಕ್ಕೆ ವಿರುದ್ದವಾಗಿದೆ. ನಟಿ ನವ್ಯಾ ನಾಯರ್ ತಮ್ಮ ಬ್ಯಾಗ್ನಲ್ಲಿ ಜಾಜಿ ಮಲ್ಲಿಗೆ ಇರುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಪೊಲೀಸರು ದಂಡ ಕಟ್ಟಲು ಹೇಳಿದ್ದಾರೆ.
ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆ ಮೊಳವನ್ನು ಎರಡು ತುಂಡು ಮಾಡಿ ಒಂದನ್ನು ಮುಡಿದುಕೊಂಡರೆ ಮತ್ತೊಂದನ್ನು ಹ್ಯಾಂಡ್ ಬ್ಯಾಗ್ನಲ್ಲಿ ಇಟ್ಟಿದ್ದಾರೆ.
ನಟಿ ನವ್ಯಾ ನಾಯರ್ ಮಲ್ಲಿಗೆ ಬ್ಯಾಗ್ ನಲ್ಲಿ ಇಟ್ಟ ತಪ್ಪಿಗೆ 1.14 ಲಕ್ಷ ರೂ. ದಂಡ ಕಟ್ಟಿದ್ದಾರೆ. 1 ಗೇಣು ಮಲ್ಲಿಗೆ ತೆಗೆದುಕೊಂಡಿದ್ದಕ್ಕೆ 1.14 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾದ ಕಾರ್ಯಕ್ರಮವೊಂದರಲ್ಲಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಗರಿಷ್ಠ AUD 6,600 ಅಂದರೆ ಭಾರತೀಯ ರೂಪಾಯಿಗಳಲ್ಲಿ 1.14 ಲಕ್ಷ ರೂಪಾಯಿ ದಂಡ ಪಾವತಿಸಲು ಸೂಚಿಸಿದ್ದಾರೆ. ದಂಡ ಪಾವತಿಸಲು 28 ದಿನದ ಕಾಲಾವಕಾಶ ನೀಡಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


