ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್ ಜಾತಿ ಹೇಳಬೇಡ, ಜಾತಿ ಕೇಳಬೇಡ, ಜಾತಿ ಮಾಡದೆ ಬದುಕನ್ನು ಸಾಗಿಸು ಎಂದು ಹೇಳಿದವರು ನಾರಾಯಣ ಗುರುಗಳು. ಇವರ ಆಚಾರ, ವಿಚಾರದಲ್ಲಿ ನಾವುಗಳು ನಡೆಯ ಬೇಕು. ನಾನು ಜಾತಿ ಮೇಲೆ ನಿಂತಿರುವ ವ್ಯಕ್ತಿಯಲ್ಲ. ಪ್ರೀತಿ, ವಿಶ್ವಾಸಕ್ಕೆ, ಮಾನವನ ಬದುಕಿನ ಉನ್ನತಿ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುವವನು ಎಂದರು. ನಂತರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುರಿತು ಮಾತನಾಡಿ, ಹಳೆಯ ದಿನಗಳ ಕುರಿತು ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.
1979 ರಿಂದಲೂ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆಯಲೇ ಬೇಕು. ನನ್ನ ರಾಜಕಾರಣದ ಬದುಕಿನಲ್ಲಿ ಅವರ ಶಿಷ್ಯನಾಗಿ ಬೆಳೆದೆ. ನನ್ನನ್ನು ಚಿಕ್ಕ ವಯಸ್ಸಿಗೆ ಮಂತ್ರಿ ಮಾಡಿ ಬೆಳೆಸಿದವರು. ವಿದ್ಯಾರ್ಥಿ ನಾಯಕನಾಗಿದ್ದ ನನ್ನ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದರು.
ಬಂಗಾರಪ್ಪ ಅವರು ಪಕ್ಷಕ್ಕೆ ರಾಜಿನಾಮೆ ನೀಡುವ ಸಂದರ್ಭ, ಆಗ ನಾನು ಮತ್ತು ಬೆಳ್ಳಿಯಪ್ಪ ಅವರ ಬಳಿ ಹೋಗಿ, ನಾವು ಏನು ಮಾಡುವುದು ಎಂದಾಗ, ಅವರ ತಲೆಯಲ್ಲಿ ಬೇರೆ ಪಕ್ಷ ಕಟ್ಟುವ ಆಲೋಚನೆಯಿತ್ತು. ಆದರೂ ನನ್ನ ಬೆಳವಣಿಗೆ ಬಗ್ಗೆ ಕಾಳಜಿ ಇದ್ದ ಅವರು ಎಸ್.ಎಂ.ಕೃಷ್ಣ ಅವರ ಜೊತೆಯಲ್ಲಿ ಹೋಗು ಎಂದರು. ನನಗೆ ಎಸ್.ಎಂ.ಕೃಷ್ಣ ಅವರು ಬೇರೆ ರೀತಿಯಲ್ಲಿ ಗುರುವಾದರೆ. ನನಗೆ ಮಾರ್ಗದರ್ಶನ ನೀಡಿ, ಅಡಿಪಾಯ ಹಾಕಿ, ತಿದ್ದಿ ತೀಡಿದವರು ಬಂಗಾರಪ್ಪನವರು ಎಂದರು.
ಮಧು ಬಂಗಾರಪ್ಪ ಅವರು ಅವರ ತಂದೆಯ ಜೊತೆಯಲ್ಲಿಯೇ ಬೇರೆ ಪಕ್ಷಕ್ಕೆ ಹೋಗಿದ್ದರು. ನಾನು ಆ ಕಡೆ ಸರಿಯಿಲ್ಲ ಎಂದು ಎಳೆದುಕೊಂಡು ಬಂದೆ. ನಾನು ಜೊತೆಯಲ್ಲಿ ಇದ್ದೇನೆ ಎಂದು ಅವರಿಗೆ ಹೇಳಿದೆ. ಖಾತೆ ಹಂಚಿಕೆ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾಗಿತ್ತು. ನಾನು, ಸಿದ್ದರಾಮಯ್ಯ ಅವರು, ಸುರ್ಜೇವಾಲ ಅವರು ಚರ್ಚೆ ಮಾಡಿ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ನೀಡಿದೆವು ಎಂದು ಹೇಳಿದ್ದಾರೆ.
,
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


