ಬಾಗಲಕೋಟೆ: ಕೌಟುಂಬಿಕ ಕಲಹಗಳು ಯಾವ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಇಲ್ಲೊಂದು ಬೆಚ್ಚಿಬೀಳಿಸುವ ಘಟನೆಯೇ ಸಾಕ್ಷಿ. ಹಣ ಮತ್ತು ಆಸ್ತಿಗಾಗಿ ನಿರಂತರವಾಗಿ ಜಗಳ ತೆಗೆಯುತ್ತಿದ್ದ ಮಗನೊಬ್ಬನನ್ನು ಆತನ ತಂದೆ, ತಾಯಿ ಹಾಗೂ ಯೋಧ ಸಹೋದರ ಸೇರಿ ಕೈ-ಕಾಲು ಕಟ್ಟಿ, ಡೀಸೆಲ್ ಸುರಿದು ಸುಟ್ಟು ಕೊಲೆ ಮಾಡಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಅನಿಲ್ ಕಾನಟ್ಟಿ (32) ಎಂದು ಗುರುತಿಸಲಾಗಿದೆ. ಅನಿಲ್ ಮದ್ಯಪಾನ ಮತ್ತು ಆನ್‌ಲೈನ್ ಬೆಟ್ಟಿಂಗ್ ಸೇರಿದಂತೆ ಹಲವು ದುಶ್ಚಟಗಳಿಗೆ ದಾಸನಾಗಿದ್ದ. ಈಗಾಗಲೇ ಕುಟುಂಬದವರು ಆತನ ₹20 ಲಕ್ಷ ಸಾಲವನ್ನು ತೀರಿಸಿದ್ದರೂ, ಮತ್ತೆ ₹5 ಲಕ್ಷ ಕೇಳಿ ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದ. ತನ್ನ ಪಾಲಿನ ಆಸ್ತಿ ನೀಡುವಂತೆ ನಿತ್ಯ ಜಗಳವಾಡುತ್ತಿದ್ದನು. ಆಸ್ತಿ ನೀಡಿದರೆ ಅದನ್ನು ಮಾರಾಟ ಮಾಡುತ್ತಾನೆಂಬ ಭೀತಿಯಿಂದ ಪೋಷಕರು ಅದನ್ನು ನೀಡಲು ಹಿಂಜರಿಯುತ್ತಿದ್ದರು.
ಸೆಪ್ಟೆಂಬರ್ 5ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಜೆಯ ಮೇಲೆ ಊರಿಗೆ ಬಂದಿದ್ದ ಯೋಧನಾದ ಸಹೋದರ ಬಸವರಾಜ್ (35) ಜೊತೆಯೂ ಅನಿಲ್ ಜಗಳವಾಡಿದ್ದಾನೆ. ಕುಟುಂಬದವರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಪರಿಸ್ಥಿತಿ ಕೈಮೀರಿದೆ. ಅನಿಲ್‌ನ ಕೈ-ಕಾಲು ಕಟ್ಟಿ, ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ನಡೆಸಿದ ನಂತರ ಡೀಸೆಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್‌ನ ತಂದೆ ಪರಪ್ಪ (62), ತಾಯಿ ಶಾಂತಾ (55) ಮತ್ತು ಸಹೋದರ ಬಸವರಾಜರನ್ನು ಪೊಲೀಸರು ಬಂಧಿಸಿದ್ದಾರೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೆರಿಕಾದಲ್ಲಿ ಶಾಪ್‌ಲಿಫ್ಟಿಂಗ್: ₹1 ಲಕ್ಷ ಮೌಲ್ಯದ ವಸ್ತು ಕದ್ದು ಸಿಕ್ಕಿಬಿದ್ದ ಭಾರತೀಯ ಯುವತಿ!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


