ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಈಗಾಗಲೇ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿರುವ ಛಾವಾ ಈ ವರ್ಷ ಸದ್ಯಕ್ಕೆ ಅತಿಹೆಚ್ಚು ಕಲೆಕ್ಷನ್ ಮಾಡಿದೆ.
ಇನ್ನು ಚಿತ್ರ ವಿಮರ್ಶೆ ವಿಷಯದಲ್ಲಿ ಛಾವಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಕೆಲ ಸಿನಿ ರಸಿಕರು ಚಿತ್ರಕ್ಕೆ ಜೈ, ಹಾಗೆ ಸಾಂಭಾಜಿ ಮಹಾರಾಜ್‌ಗೆ ಜೈ ಎಂದರೆ, ಇನ್ನೂ ಕೆಲವರು ಚಿತ್ರದಲ್ಲಿ ನಾಯಕನ ಪಾತ್ರವನ್ನು ಚೆನ್ನಾಗಿ ತೋರಿಸುವ ಸಲುವಾಗಿ ಇತರೆ ಪಾತ್ರಗಳನ್ನು ತಪ್ಪಾಗಿ ತೋರಿಸಲಿದೆ, ಇದೊಂದು ಅರ್ಧಬೆಂದ ಕತೆ ಎಂದು ಟ್ರೋಲ್ ಮಾಡಿದ್ದಾರೆ.
ಹೀಗೆ ಚಿತ್ರದಲ್ಲಿನ ಅಂಶಗಳ ಬಗ್ಗೆ ಕೆಲವರು ಮಾತನಾಡಿದರೆ, ಇನ್ನೂ ಕೆಲವರು ಚಿತ್ರದಲ್ಲಿನ ಅಂಶವನ್ನು ಪರಿಗಣಿಸಿ ಮಹಾ ಪ್ರಯೋಗವನ್ನೇ ಮಾಡಿದ್ದಾರೆ. ಚಿತ್ರದಲ್ಲಿ ಮಧ್ಯಪ್ರದೇಶದ ಆಸಿಘರ್ ಕೋಟೆಯಲ್ಲಿ ಮೊಘಲರು ಮರಾಠರಿಂದ ಲೂಟಿ ಮಾಡಿದ ಚಿನ್ನವನ್ನು ಹುದುಗಿಸಿ ಇಟ್ಟಿದ್ದಾರೆ ಎಂಬ ದೃಶ್ಯವಿದೆ.
ಈ ದೃಶ್ಯವನ್ನು ಆಧರಿಸಿ ನೂರಾರು ಜನರು ಆಸಿಘರ್ ಕೋಟೆಯ ನಲೆವನ್ನು ಅಗೆದಿದ್ದಾರೆ. ಆದರೆ ಕೊನೆಗೆ ಏನೂ ಸಿಗದೇ ಬರಿಗೈನಲ್ಲಿ ವಾಪಸ್ ಆಗಿದ್ದಾರೆ. ಈ ಕುರಿತ ಪೋಟೊ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


