ಬೆಂಗಳೂರು: ಮೊನ್ನೆ ( ಮಾರ್ಚ್ 7 ) ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬವನ್ನು ಕುಟುಂಬದವರು ಹಾಗೂ ಸ್ನೇಹಿತರು ಅದ್ದೂರಿಯಾಗಿ ಆಚರಿಸಿದ್ದಾರೆ.
ಈ ಹಿಂದೆ ಯಶ್ ಹುಟ್ಟುಹಬ್ಬವನ್ನು ರಾಧಿಕಾ ಪಂಡಿತ್ ಬಹಳ ಅದ್ದೂರಿಯಾಗಿ ಗೋವಾ ಬೀಚ್ ನಲ್ಲಿ ಆಚರಿಸಿದ್ದರು. ಅದೇ ರೀತಿ ಇದೀಗ ರಾಧಿಕಾ ಹುಟ್ಟುಹಬ್ಬವನ್ನು ಯಶ್ ಅದ್ಭುತವಾಗಿ ಆಯೋಜಿಸಿ ಆಚರಿಸಿದ್ದಾರೆ.
ಈ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ ಕನ್ನಡದ ಹಳೆಯ ಹಾಡೊಂದನ್ನು ಹಾಡಿರುವ ವಿಡಿಯೊ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಯಶ್ ಮೈಕ್ ಹಿಡಿದು ನನ್ನ ಫೇವರಿಟ್ ಹಾಡು ಎಂದು ಶಂಕರ್ ನಾಗ್ ನಟನೆಯ ಗೀತಾ ಚಿತ್ರದ ಜೊತೆಯಲಿ ಜೊತೆ ಜೊತೆ ಜೊತೆಯಲಿ ಹಾಡನ್ನು ಹಾಡಿದ್ದಾರೆ. ಯಶ್ ಗಾಯನಕ್ಕೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


