ದುಬೈ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬ್ಯಾಟಿಂಗ್ ಆರಿಸಿಕೊಂಡಿದೆ. ಈ ಮೂಲಕ ರೋಹಿತ್ ಶರ್ಮಾ ಸತತವಾಗಿ 12 ಟಾಸ್ಗಳನ್ನು ಸೋತು ಸತತವಾಗಿ ಅತಿಹೆಚ್ಚು ಟಾಸ್ ಸೋತ ನಾಯಕ ಎನಿಸಿಕೊಂಡಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ತಂಡದ ಬ್ರಿಯಾನ್ ಲಾರಾ ಸಹ ಇದೇ ರೀತಿ ಸತತವಾಗಿ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದರು.
ಇನ್ನು ಇದೊಂದು ಕೆಟ್ಟ ದಾಖಲೆಯಾಗಿದ್ದರೂ ರವಿಚಂದನ್ ಅಶ್ವಿನ್ ರೋಹಿತ್ ಶರ್ಮಾ ಫೈನಲ್ ಪಂದ್ಯದಲ್ಲಿ ಸೋತರೆ ಒಳ್ಳೆಯದು ಎಂದು ಪಂದ್ಯಕ್ಕೂ ಮುನ್ನವೇ ಹೇಳಿದ್ದರು.
ಹೌದು, ಟಾಸ್ ಸೋಲುವುದರಿಂದ ಭಾರತಕ್ಕೆ ವ್ಯತ್ಯಾಸವೇನೂ ಆಗುವುದಿಲ್ಲ. ಭಾರತ ಟಾಸ್ ಗೆಲ್ಲುವತ್ತ ಗುರಿಯನ್ನು ಇಡಲೇಬಾರದು. ಟಾಸ್ ಸೋತು ಎದುರಾಳಿ ನ್ಯೂಜಿಲೆಂಡ್ ಏನು ಬೇಕಾದರೂ ಆರಿಸಿಕೊಳ್ಳಲು ಬಿಡಬೇಕು. ಇದು ಭಾರತವನ್ನು ತುಸು ಕಷ್ಟಕ್ಕೆ ತಳ್ಳಿದರೂ ಭಾರತ ಈ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿಯೂ ಗೆದ್ದಿದೆ ಹಾಗೂ ಮೊದಲು ಬೌಲಿಂಗ್ ಮಾಡಿಯೂ ಗೆದ್ದಿದೆ’ ಎಂದು ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


