ದುಬೈ: 2025ರ ಚಾಂಪಿಯನ್ಸ್ ಟ್ರೋಫಿಗೆ ಇಂದು (ಮಾರ್ಚ್ 9) ನಡೆಯಲಿರುವ ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.
2000ದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಗಳ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಇತ್ತಂಡಗಳು ಇದೀಗ ಮೂರನೇ ಬಾರಿಗೆ ಐಸಿಸಿ ಟೂರ್ನಿಯೊಂದರಲ್ಲಿ ಫೈನಲ್ನಲ್ಲಿ ಸೆಣಸಾಡಲಿವೆ.
ಕಳೆದ ಎರಡು ಐಸಿಸಿ ಫೈನಲ್ ಮುಖಾಮುಖಿಯಲ್ಲಿ ಗೆದ್ದು ಬೀಗಿದ್ದ ನ್ಯೂಜಿಲೆಂಡ್ ಈ ಬಾರಿಯೂ ಸಹ ಗೆಲುವಿನತ್ತ ಕಣ್ಣಿಟ್ಟಿದ್ದು, ಇತ್ತ ಭಾರತ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಕಿವೀಸ್ ಸೋಲಿಸಿದ್ದು ಮೇಲುಗೈ ಸಾಧಿಸಿದೆ.
ಇನ್ನು ಭಾರತದ ಜತೆಗಿನ ಫೈನಲ್ ಸೆಣಸಾಟದ ಕುರಿತು ನ್ಯೂಜಿಲೆಂಡ್ ತಂಡದ ಹೆಡ್ ಕೋಚ್ ಗ್ಯಾರಿ ಸ್ಟಡ್ ಮಾತನಾಡಿದ್ದು, ಭಾರತ ತಂಡದ ಆಟಗಾರನೊಬ್ಬ ತಮಗೆ ತೊಂದರೆ ಎಂದು ಹೇಳಿಕೊಂಡಿದ್ದಾರೆ.
ಹೌದು, ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೇ ನಮಗೆ ದೊಡ್ಡ ತೊಂದರೆ ಎಂದು ಗ್ಯಾರಿ ಸ್ಟಡ್ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಗ್ಯಾರಿ ಸ್ಟಡ್ “ವರುಣ್ ಕ್ಲಾಸ್ ಬೌಲರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕೊನೆಯ ಪಂದ್ಯದಲ್ಲಿ ಆತ ತನ್ನ ಸಾಮರ್ಥ್ಯವನ್ನು ನಮಗೆ ತೋರಿಸಿದ್ದಾನೆ. ಆತ ನಮಗೆ ದೊಡ್ಡ ತೊಂದರೆ. ಆತನನ್ನು ಮಟ್ಟಹಾಕಲು ಪ್ರಯತ್ನ ಮಾಡುತ್ತೇವೆ. ಆತನ ವಿರುದ್ಧ ಹೇಗೆ ರನ್ ಕಲೆಹಾಕಬೇಕು ಎಂಬುದನ್ನು ನೋಡಬೇಕಿದೆ” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


