ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಿಸ್ಥಿತಿ ಹದಗೆಟ್ಟಿದ್ದು, ಪರಿಣಾಮ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್ 22ರಂದು ಶುರುವಾಗಿದ್ದ ಈ ಬಾರಿಯ ಐಪಿಎಲ್‌ನಲ್ಲಿ ನಿನ್ನೆ (ಮೇ 8) ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದವರೆಗೂ 58 ಲೀಗ್ ಪಂದ್ಯಗಳು ಮುಕ್ತಾಯವಾಗಿವೆ.
ಧರ್ಮಶಾಲಾದಲ್ಲಿ ನಡೆದ ಈ ಪಂದ್ಯ ಸಹ ಭದ್ರತಾ ದೃಷ್ಟಿಯಿಂದಲೇ 10.1 ಓವರ್ ಬಳಿಕ ಸ್ಥಗಿತಗೊಂಡಿತ್ತು. ಸದ್ಯ ಇಡೀ ಟೂರ್ನಿಯೇ ರದ್ದಾಗಿದ್ದು, ಟೂರ್ನಿ ಯಾವಾಗ ಮತ್ತೆ ಮುಂದುವರಿಯಲಿದೆ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಉತ್ತರ ಇದೇ ವರ್ಷದ ಸೆಪ್ಟೆಂಬರ್ ತಿಂಗಳು. ಹೌದು, ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾ ಕಪ್ ಆಯೋಜನೆಯಾಗಬೇಕಿತ್ತು. ಆದರೆ ಭಾರತ ಹಾಗೂ ಪಾಕ್ ನಡುವಿನ ಕಿತ್ತಾಟದ ನಡುವೆ ಈ ಟೂರ್ನಿ ನಡೆಯುವುದು ಅನುಮಾನ.
ಹೀಗಾಗಿ ಐಪಿಎಲ್ ಟೂರ್ನಿಯನ್ನು ಆ ಸಮಯದಲ್ಲಿ ನಡೆಸಬಹುದು ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ತಿಳಿಸಿದ್ದಾರೆ.
ಇನ್ನು ಸೆಪ್ಟೆಂಬರ್ ಹೊರತುಪಡಿಸಿ ವರ್ಷದ ಉಳಿದ ತಿಂಗಳು ಭಾರತ ವಿವಿಧ ಸರಣಿಗಳಲ್ಲಿ ನಿರತವಾಗಲಿದ್ದು, ಸೆಪ್ಟೆಂಬರ್ ತಿಂಗಳು ಲಭ್ಯವಿರಲಿದೆ. ಈ ವರ್ಷ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಕೆಳಕಂತಿದೆ.
ಜೂನ್ 20ರಿಂದ ಜುಲೈ 31 – ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ( ಇಂಗ್ಲೆಂಡ್‌ನಲ್ಲಿ )
ಆಗಸ್ಟ್: ಬಾಂಗ್ಲಾದೇಶದ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ( ಬಾಂಗ್ಲಾದೇಶದಲ್ಲಿ )
ಸೆಪ್ಟೆಂಬರ್: ಏಷ್ಯಾಕಪ್
ಅಕ್ಟೋಬರ್: ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ( ಭಾರತದಲ್ಲಿ )
ಅಕ್ಟೋಬರ್: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ( ಆಸ್ಟ್ರೇಲಿಯಾದಲ್ಲಿ )
ನವೆಂಬರ್: ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ( ಭಾರತದಲ್ಲಿ )
ನವೆಂಬರ್: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ( ಭಾರತದಲ್ಲಿ )
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


