Saturday, May 30, 2026
spot_img
More
    spot_img
    HomeEntertainmentರಾಮಾಯಣ’ ಫಸ್ಟ್ ಲುಕ್ ಮ್ಯಾಜಿಕ್: 48 ಗಂಟೆಗಳಲ್ಲಿ ನಿರ್ಮಾಪಕರಿಗೆ ₹1,000 ಕೋಟಿ ಲಾಭ

    ರಾಮಾಯಣ’ ಫಸ್ಟ್ ಲುಕ್ ಮ್ಯಾಜಿಕ್: 48 ಗಂಟೆಗಳಲ್ಲಿ ನಿರ್ಮಾಪಕರಿಗೆ ₹1,000 ಕೋಟಿ ಲಾಭ

    ಬಹುನಿರೀಕ್ಷಿತ ಭಾರತದ ಮಹಾಕಾವ್ಯ ‘ರಾಮಾಯಣ’ ಚಿತ್ರದ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಇದು ಪ್ರೇಕ್ಷಕರನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವಂತೆ ಅದ್ಭುತ ಅನುಭವ ನೀಡುತ್ತಿದೆ. ಚಿತ್ರತಂಡವು ಅತ್ಯಾಧುನಿಕ ಗ್ರಾಫಿಕ್ಸ್ ಮತ್ತು ಮ್ಯೂಸಿಕ್ ಮೂಲಕ ಹೊಸತನವನ್ನು ನೀಡಿದ್ದು, ಇದರಿಂದ ‘ರಾಮಾಯಣ’ ಚಿತ್ರದ ಮೇಲಿನ ನಿರೀಕ್ಷೆಗಳು ಹತ್ತುಪಟ್ಟು ಹೆಚ್ಚಾಗಿವೆ. ಕೊನೆಯಲ್ಲಿ ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ಅವರ ಲುಕ್‌ಗಳು ಬಹಿರಂಗಗೊಂಡು, ಸಾಮಾಜಿಕ ಮಾಧ್ಯಮದಲ್ಲಿ ಯಶ್ ಫುಲ್ ಟ್ರೆಂಡ್ ಆಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಚಿತ್ರವು ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ, ದುಬಾರಿ ಮತ್ತು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಪ್ರೈಮ್ ಫೋಕಸ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವು 2026 ರ ದೀಪಾವಳಿಗೆ ಬಿಡುಗಡೆಯಾಗಲಿದೆ. ‘ರಾಮಾಯಣ’ ಚಿತ್ರದ ಎರಡೂ ಭಾಗಗಳ ಒಟ್ಟು ಬಜೆಟ್ ₹1,600 ಕೋಟಿ ಮೊದಲ ಭಾಗಕ್ಕೆ ₹835 ಕೋಟಿ ಮತ್ತು ಎರಡನೇ ಭಾಗಕ್ಕೆ ₹700 ಕೋಟಿ. ಫಸ್ಟ್ ಲುಕ್ ಬಿಡುಗಡೆ ನಂತರವೇ ಈ ಚಿತ್ರವು ₹1,000 ಕೋಟಿ ವ್ಯವಹಾರವನ್ನು ಸಾಧಿಸಿರುವುದು ವಿಶೇಷವಾಗಿದೆ. ಈ ಯಶಸ್ಸಿಗೆ ಫಸ್ಟ್ ಲುಕ್ ವಿಡಿಯೋ ಪ್ರಮುಖ ಕಾರಣವಾಗಿದೆ ಎಂದು ಚಿತ್ರರಂಗದಲ್ಲಿ ಹೇಳಿಕೊಳ್ಳಲಾಗುತ್ತಿದೆ.

    Advertisement

    ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರವನ್ನು ನಮಿತ್ ಮಲ್ಹೋತ್ರಾ ನೇತೃತ್ವದ ಪ್ರೈಮ್ ಫೋಕಸ್ ಸ್ಟುಡಿಯೋಸ್ ನಿರ್ಮಿಸುತ್ತಿದೆ. ಈ ಕಂಪನಿ 2006ರಿಂದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಪಟ್ಟಿಯಾಗಿದೆ. ಜುಲೈ 3ರಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆದ ಬಳಿಕ, ಪ್ರೈಮ್ ಫೋಕಸ್‌ನ ಷೇರು ಬೆಲೆ ಕೇವಲ ಎರಡು ದಿನಗಳಲ್ಲಿ ಶೇಕಡಾ 30ರಷ್ಟು ಏರಿಕೆಯಾಗಿದೆ—ಜೂನ್ 25ರಿಂದ ಜುಲೈ 1ರ ನಡುವೆ ₹113.47 ರಿಂದ ₹149.69ಕ್ಕೆ, ನಂತರ ಜುಲೈ 3ರಂದು ₹176ಕ್ಕೆ ತಲುಪಿತು. ಇದರ ಪರಿಣಾಮವಾಗಿ, ಕಂಪನಿಯ ಮಾರುಕಟ್ಟೆ ಮೌಲ್ಯ ₹4,638 ಕೋಟಿಯಿಂದ ₹5,641 ಕೋಟಿಗೆ ಏರಿತು, ಅಂದರೆ ಕೇವಲ 48 ಗಂಟೆಗಳಲ್ಲಿ ₹1,000 ಕೋಟಿ ಮೌಲ್ಯವೃದ್ಧಿಯಾಗಿದೆ.

    ಇದೊಂದು ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಘಟನೆ. ಚಿತ್ರ ಬಿಡುಗಡೆಯಾಗುವ ಮೊದಲೇ ನಿರ್ಮಾಣ ಸಂಸ್ಥೆಗೆ ಭಾರಿ ಲಾಭ ಒದಗಿದೆ. ಷೇರು ಮಾರುಕಟ್ಟೆ ಮುಗಿಯುವ ಹೊತ್ತಿಗೆ ಷೇರು ಬೆಲೆ ₹169ಕ್ಕೆ ಇಳಿದು, ಮಾರುಕಟ್ಟೆ ಮೌಲ್ಯ ₹5,200 ಕೋಟಿಗೆ ಸ್ಥಿರವಾಯಿತು.ಚಿತ್ರದ ಬಜೆಟ್ ಸುಮಾರು ₹1,600 ಕೋಟಿ (ಮೊದಲ ಭಾಗಕ್ಕೆ ₹900 ಕೋಟಿ, ಎರಡನೇ ಭಾಗಕ್ಕೆ ₹700 ಕೋಟಿ). ರಣಬೀರ್ ಕಪೂರ್ ಈ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ₹20 ಕೋಟಿ ಹೂಡಿಕೆ ಮಾಡಿದ್ದಾರೆ ಅವರಿಗೆ 1.25 ಮಿಲಿಯನ್ ಷೇರುಗಳು ನೀಡಲಾಗಿವೆ,

    ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಅಭಿನಯಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರಹಮಾನ್ ಸಂಗೀತ ನೀಡುತ್ತಿದ್ದಾರೆ. ಚಿತ್ರವನ್ನು 2026ರ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ ಎರಡನೇ ಭಾಗ ಬಿಡುಗಡೆ ಮಾಡಲು ಯೋಜಿಸಲಾಗಿದೆ.ಫಸ್ಟ್ ಲುಕ್ ಬಿಡುಗಡೆ ನಂತರ ಪ್ರೈಮ್ ಫೋಕಸ್ ಷೇರು ಬೆಲೆಯಲ್ಲಿ ಕಂಡುಬಂದ ಈ ಏರಿಕೆ ಹಾಗೂ ಮುಂಗಡ ಹಕ್ಕುಗಳ ಒಪ್ಪಂದದಿಂದ, ‘ರಾಮಾಯಣ’ ಚಿತ್ರ ಬಿಡುಗಡೆಯಾಗುವ ಮೊದಲೇ ನಿರ್ಮಾಪಕರು ಸಾವಿರ ಕೋಟಿ ರೂ. ಮೌಲ್ಯವೃದ್ಧಿ ಸಾಧಿಸಿದ್ದಾರೆ.

    ಎರಡು ಭಾಗಗಳ ‘ರಾಮಾಯಣ’ ಚಿತ್ರದಲ್ಲಿ ಲಾರ್ಡ್ ರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್, ಈ ಮಹಾಕಾವ್ಯದಲ್ಲಿ ತಾರಾಗಣದಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ನಟರಾಗಿದ್ದಾರೆ. ವರದಿಗಳ ಪ್ರಕಾರ, ರಣಬೀರ್ ಪ್ರತಿ ಭಾಗಕ್ಕೆ ₹75 ಕೋಟಿ, ಒಟ್ಟು ಎರಡು ಭಾಗಗಳಿಗೆ ₹150 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಪೇಮೆಂಟ್ ಆಗಿದೆ ಎಂದು ಚಿತ್ರರಂಗದ ಮೂಲಗಳು ದೃಢಪಡಿಸಿವೆ.

    ನಮಗೆ ಭಾಷೆನೇ ಮುಖ್ಯ; ಕನ್ನಡ ತೆಗಳಿದ್ದ ಸೋನು ನಿಗಮ್‌ಗೆ ನಟ ಗಣೇಶ್ ಕೌಂಟರ್?

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading