Saturday, May 30, 2026
spot_img
More
    spot_img
    HomeLatest newsಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿದ ಬಳಿಕ ಸಿಎಂ ಆಗ್ತೀರಾ? ದೆಹಲಿಯಲ್ಲಿ ಡಿಕೆಶಿ ನೇರ ಪ್ರತಿಕ್ರಿಯೆ!

    ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿದ ಬಳಿಕ ಸಿಎಂ ಆಗ್ತೀರಾ? ದೆಹಲಿಯಲ್ಲಿ ಡಿಕೆಶಿ ನೇರ ಪ್ರತಿಕ್ರಿಯೆ!

    ಹೊಸದಿಲ್ಲಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ದೆಹಲಿ ಪ್ರವಾಸ ಕೈಗೊಂಡಿದ್ದು, ಕೈ ನಾಯಕರನ್ನು ಭೇಟಿಯಾಗಿದ್ದಾರೆ.

    Advertisement

    ನಿನ್ನೆ ( ಜುಲೈ 8 ) ಡಿಕೆ ಶಿವಕುಮಾರ್‌ ದೆಹಲಿಗೆ ತೆರಳಿದ್ದರೆ, ಇಂದು ಸಿದ್ದರಾಮಯ್ಯ ದೆಹಲಿಗೆ ಪಯಣ ಬೆಳೆಸಿದ್ದಾರೆ. ಇವರಿಬ್ಬರ ಈ ಭೇಟಿ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳು ಹೆಚ್ಚಾಗಿ ಹರಿದಾಡಿವೆ.

    ಇನ್ನು ನಿನ್ನೆ ಮಾಧ್ಯಮದವರೆ ಜೊತೆ ಮಾತನಾಡಿ ಈ ಕುರಿತು ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್‌ ಇದು ರಾಜಕೀಯ ಕುರಿತು ಮಾತನಾಡುವ ಸಮಯವಲ್ಲ, ಮುಖ್ಯಮಂತ್ರಿ ಹುದ್ದೆ ಖಾಲಿಯೂ ಇಲ್ಲ ಎಂದು ಹೇಳಿಕೆ ನೀಡಿದ್ದರು.

    ಇಂದೂ ಸಹ ಈ ಕುರಿತು ಪ್ರಶ್ನೆ ಎದುರಾಗಿದ್ದು, ಪತ್ರಕರ್ತರು ಎರಡೂವರೆ ವರ್ಷ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ಪ್ರಶ್ನೆಯನ್ನಿಟ್ಟರು. ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್‌ ʼಅದು ನಿಮ್ಮ ಕಡೆಯ ಊಹಾಪೋಹ. ನನ್ನ ಕಡೆ ಅಂತಹ ಯಾವುದೇ ರೀತಿಯ ಊಹಾಪೋಹವಿಲ್ಲ, ಅದು ನನ್ನ ಕಣ್ಣಿಗೂ ಬಿದ್ದಿಲ್ಲ ಹಾಗೂ ಕಿವಿಗೂ ಸಹ ಬಿದ್ದಿಲ್ಲʼ ಎಂದು ಹೇಳಿಕೆ ನೀಡಿದರು. ಈ ಮೂಲಕ ಎರಡೂವರೆ ವರ್ಷ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದರು.

    ರಾಜ್ಯಕ್ಕೆ ತಟ್ಟದ ಭಾರತ್‌ ಬಂದ್‌ ಬಿಸಿ; ಬ್ಯಾಂಕಿಂಗ್‌ ಸೇವೆ ಇದೆಯಾ, ಇಲ್ವಾ?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading