Thursday, November 5, 2026
spot_img
More
    spot_img
    HomeCrimeಪರಪ್ಪನ ಅಗ್ರಹಾರ ಎಎಸ್‌ಐ ಸೇರಿ ಕರ್ನಾಟಕದಲ್ಲಿ ಮೂವರು ಶಂಕಿತ ಉಗ್ರರ ಅರೆಸ್ಟ್!

    ಪರಪ್ಪನ ಅಗ್ರಹಾರ ಎಎಸ್‌ಐ ಸೇರಿ ಕರ್ನಾಟಕದಲ್ಲಿ ಮೂವರು ಶಂಕಿತ ಉಗ್ರರ ಅರೆಸ್ಟ್!

    ಬೆಂಗಳೂರು: ಉಗ್ರರಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂವರನ್ನು ಎನ್‌ಐಎ ಬಂಧಿಸಿದೆ. ಪರಪ್ಪನ ಅಗ್ರಹಾರದ ಎಎಸ್‌ಐ ಚಾಂದ್‌ ಪಾಷಾ ಸಹ ಬಂಧನಕ್ಕೊಳಗಾಗಿದ್ದು, ಕರ್ತವ್ಯ ನಿರ್ವಹಿಸಬೇಕಾದ ಆರಕ್ಷಕನೇ ಶಂಕಿತ ಉಗ್ರನಾಗಿ ಬಂಧನಕ್ಕೊಳಗಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.

    ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್‌ ಎಂಬಾತನನ್ನೂ ಸಹ ಬಂಧಿಸಲಾಗಿದ್ದು, ನಾಪತ್ತೆಯಾದ ಮತ್ತೋರ್ವ ಆರೋಪಿ ಜುನೈದ್‌ ತಲೆ ಮರೆಸಿಕೊಂಡಿದ್ದು, ಆತನ ತಾಯಿ ಆನಿಸ್‌ ಫಾತಿಮಾ ಅವರನ್ನು ಬಂಧಿಸಲಾಗಿದೆ.

    ಬೆಂಗಳೂರು ಹಾಗೂ ಕೋಲಾರದ ಐದು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎರಡು ವಾಕಿ ಟಾಕಿ ಹಾಗೂ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.

    ಉಗ್ರರಿಗೆ ಬೇಕಾದ ನೆರವನ್ನು ನೀಡಿದ್ದ ಗಂಭೀರ ಆರೋಪ ಈ ಮೂವರ ಮೇಲಿದ್ದು, ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ತನಿಖೆಯಲ್ಲಿ ಮತ್ತಷ್ಟು ಮಾಹಿತಿಯನ್ನು ಹೊರತರಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳಿಬ್ಬರು ಉಗ್ರರ ಜೊತೆ ನಂಟು ಹೊಂದಿದ್ದಾರೆ ಎಂಬ ವಿಷಯ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

    ಇಂದು ಕಾರ್ಮಿಕ ಸಂಘಟನೆಗಳಿಂದ ಭಾರತ್‌ ಬಂದ್;‌ ಬ್ಯಾಂಕ್‌ ಕಡೆ ಹೋಗೋ ಮುನ್ನ ಎಚ್ಚರ!

    ಕನ್ನಡ ಎಐ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search