ಧಾರವಾಡ: ರಾಜ್ಯದಲ್ಲಿ ಹೃದಯಾಘಾತಕ್ಕೆ ಸಂಭವಿಸುತ್ತಿರುವ ಸಾವಿನ ಸರಮಾಲೆ ಮುಂದುವರಿದಿದ್ದು, ನಿನ್ನೆ ( ಜುಲೈ 8 ) ರಾತ್ರಿ ಧಾರವಾಡದಲ್ಲಿ 25 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾರೆ.
ಎಂಎಸ್‌ಸಿ ಕೃಷಿ ಪದವೀಧರೆಯಾಗಿರುವ ಜೀವಿತಾ ಕುಸುಗೂರು ಹೃದಯಾಘಾತಕ್ಕೆ ಬಲಿಯಾಗಿದ್ದು, ಧಾರವಾಡದ ಪುರೋಹಿತ ನಗರದಲ್ಲಿ ಕೊನೆಯುಸಿರೆಳೆದಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಜೀವಿತಾ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಇನ್ನು ಈ ಪ್ರಕರಣ ಹೃದಯಾಘಾತಕ್ಕೆ ಮರಣ ಹೊಂದಿದ ಯುವಕ ಜನತೆ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದು, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಕಂಡು ಜನತೆ ಬೆಚ್ಚಿ ಬಿದ್ದಿದ್ದಾರೆ.
ಇದೇ ದಿನ ನವಲಗುಂದ ತಾಲೂಕಿನಲ್ಲಿ ಮೂವರು ಬಲಿಯಾಗಿದ್ದು, ದಾವಣಗೆರೆಯಲ್ಲೂ ಸಹ 22 ವರ್ಷದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇನ್ನು ಈಗಾಗಲೇ ಹೃದಯಾಘಾತಕ್ಕೆ ಕಾರಣಗಳನ್ನು ಆರೋಗ್ಯ ಇಲಾಖೆ ಪಟ್ಟಿ ಮಾಡಿ ಬಿಡುಗಡೆ ಮಾಡಿದ್ದು, ಅವುಗಳನ್ನು ಅರಿತು ರೂಢಿಸಿಕೊಳ್ಳಿ ಎಂದು ಯುವ ಜನತೆಗೆ ಕರೆ ನೀಡಿದೆ.
ರಾಜ್ಯಕ್ಕೆ ತಟ್ಟದ ಭಾರತ್ ಬಂದ್ ಬಿಸಿ; ಬ್ಯಾಂಕಿಂಗ್ ಸೇವೆ ಇದೆಯಾ, ಇಲ್ವಾ?
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


