Saturday, June 13, 2026
spot_img
More
    spot_img
    HomeStateDistrictನಿಧಿ ಇರುವ ಕಾರಣ ರಸ್ತೆಯಲ್ಲಿನ ಗುಂಡಿಗಳನ್ನು ರಾಜ್ಯ ಸರ್ಕಾರ ಹಾಗೆಯೇ ಬಿಟ್ಟಿದೆ; ಹೀಗೊಂದು ಎಚ್ಚರಿಕೆ ಫಲಕ!

    ನಿಧಿ ಇರುವ ಕಾರಣ ರಸ್ತೆಯಲ್ಲಿನ ಗುಂಡಿಗಳನ್ನು ರಾಜ್ಯ ಸರ್ಕಾರ ಹಾಗೆಯೇ ಬಿಟ್ಟಿದೆ; ಹೀಗೊಂದು ಎಚ್ಚರಿಕೆ ಫಲಕ!

    ಸರ್ಕಾರದ ಎಡವಟ್ಟುಗಳನ್ನು ಟೀಕಿಸಲು ಜನ ಸಾಮಾನ್ಯರು ಭಿನ್ನವಿಭಿನ್ನ ಮಾರ್ಗಗಳನ್ನು ಅನುಸರಿಸಿದ್ದನ್ನು ಕಂಡಿದ್ದೇವೆ. ಅದರಲ್ಲೂ ರಸ್ತೆ ಕಾಮಗಾರಿ ಮಾಡದ ಸರ್ಕಾರದ ವಿರುದ್ಧ ನೀರು ನಿಂತ ರಸ್ತೆಯಲ್ಲಿಯೇ ನಾಟಿ ಮಾಡಿ ಪ್ರತಿಭಟನೆ ನಡೆಸಿದ ಹಲವು ಉದಾಹರಣೆಗಳಿವೆ.

    Advertisement

    ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಫಲಕದ ಫೋಟೊವೊಂದು ವೈರಲ್‌ ಆಗಿದ್ದು, ರಸ್ತೆಯಲ್ಲಿ ನಿಧಿ ಇರುವ ಕಾರಣ ರಸ್ತೆಯನ್ನು ಸರಿ ಮಾಡಿಸದೇ ರಾಜ್ಯ ಸರ್ಕಾರ ಹಾಗೇ ಬಿಟ್ಟಿದೆ ಎಂದು ಹಾಸ್ಯಾಸ್ಪದವಾಗಿ ಬರೆಯಲಾಗಿದೆ.

    ಹೌದು, ʼಎಚ್ಚರಿಕೆ ಫಲಕʼ ಎಂಬ ತಲೆಬರದೊಂದಿಗೆ ಆರಂಭವಾಗುವ ಈ ಫಲಕದಲ್ಲಿ ʼಯಾರೋ ಮಾಂತ್ರಿಕರು ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ. ನಿಧಾನವಾಗಿ ಚಲಿಸಿʼ ಎಂದು ಬರೆಯಲಾಗಿದೆ.

    ಈ ಮೂಲಕ ಈ ಮಾರ್ಗದಲ್ಲಿ ರಸ್ತೆ ಸರಿಪಡಿಸದ ರಾಜ್ಯ ಸರ್ಕಾರವನ್ನು ಅನಾಮಧ್ಯೇಯ ವ್ಯಕ್ತಿ ವಿಭಿನ್ನವಾಗಿ ಟೀಕೆ ಮಾಡಿದ್ದಾರೆ.

    ಬೆಂಗಳೂರು: ಬಂಧಿತ ಮೂವರು ಶಂಕಿತ ಉಗ್ರರು 6 ದಿನ ಎನ್‌ಐಎ ಕಸ್ಟಡಿಗೆ

    ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading