Thursday, September 3, 2026
spot_img
More
    spot_img
    HomeLatest newsಅಪ್ಪನಾಗಿ ಕೊಡಬಾರದ ಕಷ್ಟ ಕೊಟ್ಟಿದ್ದಾರೆ; ಯೋಗೇಶ್ವರ್‌ ಬಗ್ಗೆ ಸುರ್ಜೇವಾಲಗೆ ಕೊಟ್ಟ ದೂರಿನ ಮಾಹಿತಿ ಹಂಚಿಕೊಂಡ ಪತ್ನಿ...

    ಅಪ್ಪನಾಗಿ ಕೊಡಬಾರದ ಕಷ್ಟ ಕೊಟ್ಟಿದ್ದಾರೆ; ಯೋಗೇಶ್ವರ್‌ ಬಗ್ಗೆ ಸುರ್ಜೇವಾಲಗೆ ಕೊಟ್ಟ ದೂರಿನ ಮಾಹಿತಿ ಹಂಚಿಕೊಂಡ ಪತ್ನಿ ಮಾಳವಿಕ

    ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿನಲ್ಲಿದ್ದು, ಕಾಂಗ್ರೆಸ್‌ ಶಾಸಕರ ಜೊತೆ ನೇರಾನೇರ ಚರ್ಚೆಯನ್ನು ನಡೆಸಿ ಪಕ್ಷದ ʼಅಸಮಾಧಾನತೆʼ ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

    Advertisement

    ಹೀಗಿರುವ ಸಂದರ್ಭದಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದ ಸಿಪಿ ಯೋಗೇಶ್ವರ್‌ ವಿರುದ್ಧ ವೈಯಕ್ತಿಕ ಕಾರಣಗಳನ್ನು ನೀಡಿ ಪತ್ನಿ ಮಾಳವಿಕ ದೂರನ್ನು ಸಲ್ಲಿಸಿದ್ದಾರೆ.

    ಪುತ್ರಿ ನಿಶಾ ಯೋಗೇಶ್ವರ್‌ ಜತೆ ಆಗಮಿಸಿ ಸುರ್ಜೇವಾಲ ಅವರಿಗೆ ದೂರು ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾಳವಿಕ ಓರ್ವ ತಂದೆಯಾಗಿ ಕೊಡಬಾರದ ಕಷ್ಟಗಳನ್ನೆಲ್ಲ ಯೋಗೇಶ್ವರ್‌ ತನ್ನ ಮಕ್ಕಳಿಗೆ ನೀಡಿದ್ದಾರೆ, ಅಧಿಕಾರದ ಅಸ್ತ್ರ ಬಳಸಿ ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಮಗಳು ತಂದೆಯಿಂದ ತನಗಾದ ಅನ್ಯಾಯವನ್ನು ಹಂಚಿಕೊಂಡರೆ ಅದನ್ನೂ ಸಹ ಅಧಿಕಾರವನ್ನು ಬಳಸಿಕೊಂಡು ನಾಶಪಡಿಸಿದ್ದಾರೆ ಎಂದೂ ಸಹ ಮಾಳವಿಕ ದೂಷಿಸಿದ್ದಾರೆ.

    ಬೇಕಂತಲೇ ತನ್ನ ಮಕ್ಕಳ ಮೇಲೆ ದೂರಿನ ಮೇಲೆ ದೂರುಗಳನ್ನು ಹಾಕಲಾಗಿದ್ದು, ಪ್ರತಿದಿನ ಕೋರ್ಟ್‌ ಕಚೇರಿಯಂತ ಓಡಾಡುವುದೇ ಆಗಿದೆ, ಮಕ್ಕಳನ್ನು ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಫೋರ್ಬ್ಸ್ ಟಾಪ್ 10 ಶ್ರೀಮಂತರ ಪಟ್ಟಿ 2025: ಪುರುಷರ ನಡುವೆ ಏಕೈಕ ಮಹಿಳಾ ಉದ್ಯಮಿಗೆ ಗೌರವದ ಸ್ಥಾನ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading