Friday, September 4, 2026
spot_img
More
    spot_img
    HomeEntertainmentಕಾಂತಾರ ಚಿತ್ರದಲ್ಲಿದ್ದ ಕೋಣ ಇನ್ನಿಲ್ಲ ; ಈ ಕೋಣದ ಸಾಧನೆ ಒಂದೆರಡಲ್ಲ !

    ಕಾಂತಾರ ಚಿತ್ರದಲ್ಲಿದ್ದ ಕೋಣ ಇನ್ನಿಲ್ಲ ; ಈ ಕೋಣದ ಸಾಧನೆ ಒಂದೆರಡಲ್ಲ !

    Advertisement

    ಕಾಂತಾರ ಚಿತ್ರದಲ್ಲಿ ನಟಿಸಿದ್ದ ಕೋಣ ಸಾವನ್ನಪ್ಪಿದೆ. ಚಿತ್ರದ ಪ್ರಾರಂಭದಲ್ಲಿ ಕಂಬಳದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಕಂಬಳ ಶೂಟಿಂಗ್ ನಲ್ಲಿ ಹಲವು ಪರಿಣಿತ ಕೋಣಗಳನ್ನು ಬಳಸಲಾಗಿತ್ತು. ಈ ಪೈಕಿ ರಿಷಬ್ ಶೆಟ್ಟಿ ಓಡಿಸಿದ್ದ ಕೋಣ ಮೃತಪಟ್ಟಿದೆ.

    ಅಪ್ಪು ಕೋಣ ಬೈಂದೂರ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ್ ಭಟ್ ಅವರು ಸಾಕಿದ್ದ ಕೋಣ ಆಗಿದೆ. ಅವರು ಅಪ್ಪು ಹಾಗೂ ಕಾಲಾ ಕೋಣಗಳನ್ನ ಸಾಕಿದ್ದರು. ಇದೀಗ ಅಪ್ಪು ಕೋಣಾ ನಿಧನ ಹೊಂದಿದೆ. ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತಬೇತಿ ಪಡೆದಿದ್ದರು. ಇವುಗಳ ಜೊತೆ ರಿಷಬ್​ಗೆ ಆಪ್ತತೆ ಬೆಳೆದಿತ್ತು. ಆ ಬಳಿಕ ಸಿನಿಮಾಗಳಲ್ಲೂ ಕೋಣಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಒಂದು ಕೋಣ ನಿಧನ ಹೊಂದಿದ್ದು ಸಿನಿಮಾ ಹಾಗೂ ಕಂಬಳದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

    ಕಂಬಳ ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಸಂಪಾದಿಸಿದ್ದ ಅಪ್ಪು ಕೋಣ ಈಗ ಅಗಲಿದೆ.

    ,ರಕ್ಷಾ ಬಂಧನ: ಶ್ರೀಕೃಷ್ಣ ಮತ್ತು ದ್ರೌಪದಿಯ ಪೌರಾಣಿಕ ಕಥೆ ಹಾಗೂ ರಾಖಿಯ ಆಧ್ಯಾತ್ಮಿಕ ಮಹತ್ವ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading