ಕಪ್ಪು ಜೇಡ (black coloured spider) ಕಚ್ಚಿ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆಯೊಂದು ಪೂರ್ವ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿದಿರಿನ ಬುಟ್ಟಿಯಲ್ಲಿದ್ದ ಕೋಳಿ ಮೊಟ್ಟೆಗಳನ್ನು ತೆಗೆಯಲು ಹೋದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಕಚ್ಚಿದ ಹೊಡೆತಕ್ಕೆ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ ಇದನ್ನು ಕೇಳಿ ಮನೆಮಂದಿ ಓಡಿ ಬಂದು ನೋಡಿದಾಗ ಬಾಲಕಿಯ ಕೈಗೆ ಜೇಡ ಕಚ್ಚಿರುವುದು ಗೊತ್ತಾಗಿದೆ, ಮೊದಲಿಗೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದ ಮನೆಮಂದಿ ಮನೆ ಮದ್ದು ಹಚ್ಚಿದ್ದಾರೆ ಆದರೆ ಕ್ರಮೇಣ ಬಾಲಕಿಯ ಕೈ ಊದಿಕೊಂಡಿದೆ ಇದರಿಂದ ಗಾಬರಿಗೊಂಡ ಪೋಷಕರು ಬಾಲಕಿಯನ್ನು ಕರೆದುಕೊಂಡು ಪಕ್ಕದಲ್ಲಿರುವ ಔಷಧಾಲಯಕ್ಕೆ ತೆರಳಿದ್ದಾರೆ ಅಲ್ಲಿ ಪರಿಶೀಲಿಸಿದ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ.ಬಳಿಕ ಪೋಷಕರು ಬಾಲಕಿಯನ್ನು ತಿನ್ಸುಕಿಯಾದಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ ಆದರೆ ದುರದೃಷ್ಟವಶಾತ್ ಆಸ್ಪತ್ರೆ ದಾರಿ ಮಧ್ಯೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ, ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಾಲಕಿಗೆ ಕಚ್ಚಿದ ಜೇಡವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ಯಾವ ಪ್ರಭೇದಕ್ಕೆ ಸೇರಿದ್ದಾಗಿದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಸಲಾಗುತ್ತಿದೆ.
ಕಪ್ಪು ಅಥವಾ ಕಂದು ಬಣ್ಣದ, ವಿಶೇಷವಾಗಿ ಕಪ್ಪು ವಿಧವೆ (black widow spider) ಎಂಬ ಪ್ರಬೇಧದ ಜೇಡರ ಹುಳಗಳು ಮತ್ತು ಟೊರಾಂಟ್ಯುಲಾ ಎಂಬ ಬಗೆಯ ದೊಡ್ಡ ಗಾತ್ರದ ಜೇಡದ ಕಡಿತ ಮಾರಕವಾಗಬಲ್ಲವು. ಇವುಗಳ ಹಲ್ಲು ಎಂದರೆ ಚೂಪಾದ ಮುಳ್ಳಿನಂತಿದ್ದು ತನ್ನ ಜೊಲ್ಲನ್ನು ಇದನ್ನು ಚುಚ್ಚುವ ಮೂಲಕ ರಕ್ತಕ್ಕೆ ಸುರಿಸುತ್ತದೆ. ಈ ಜೊಲ್ಲಿನಲ್ಲಿರುವ ಕೆಲವು ವಿಷಕಾರಿ ರಾಸಾಯನಿಕಗಳು ರಕ್ತಪ್ರವಾಹಕ್ಕೆ ಸೇರಿಕೊಂಡು ಗಂಭೀರ ತೊಂದರೆಗೆ ಹಾಗೂ ಪ್ರಾಣಾಪಾಯಕ್ಕೂ ಕಾರಣವಾಗಬಹುದು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


