ಬೆಳಗಾವಿ: ಇತ್ತೀಚೆಗಷ್ಟೇ ನಡೆದ ಮೂರುಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೂವರು ಇಂದು (ಡಿಸೆಂಬರ್ 9) ಬೆಳಗಾವಿಯ ಸುವರ್ಣ ಸೌಧದಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಪೈಕಿ ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ನೂತನ ಶಾಸಕ ಶಿಗ್ಗಾಂವ್ ಪಠಾಣ್ ಗಮನ ಸೆಳೆದಿದ್ದಾರೆ. ಸಂಡೂರು ಕ್ಷೇತ್ರದ ಅನ್ನಪೂರ್ಣಮ್ಮ, ಚನ್ನಪಟ್ಟಣ ಕ್ಷೇತ್ರದ ಯೋಗೇಶ್ವರ್ ಮತ್ತು ಶಿಗ್ಗಾಂವ್ ನ ಪಠಾಣ್ ಪ್ರಮಾಣ ವಚನ ಸ್ವೀಕರಿಸಿದರು.
ಸಿದ್ದು, ಡಿಕೆಶಿ ಪಾದ ನಮಸ್ಕರಿಸಿದ ಅನ್ನಪೂರ್ಣ
ಪತಿ ಸಂಸತ್ತಿಗೆ ಆಯ್ಕೆಯಾಗಿರುವುದರಿಂದ ಸಂಡೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿರುವ ಅನ್ನಪೂರ್ಣ ತುಕಾರಾಂ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೂ ಮೊದಲು ಅವರು ವಿಧಾನಸಭಾ ಪ್ರಾಂಗಣದಲ್ಲಿ ತಮ್ಮ ಪತಿಯೊಂದಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪಾದಗಳಿಗೆ ನಮಸ್ಕರಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


