Monday, August 31, 2026
spot_img
More
    spot_img
    HomeTop Storyಪ್ರತಿಷ್ಠೆಗಾಗಿ ವಿವಿಗಳನ್ನು ಆರಂಭಿಸುವ ಔಚಿತ್ಯವಾದರೂ ಏನಿದೆ?; ದಿನೇಶ್‌ ಗುಂಡೂರಾವ್‌ ಪ್ರಶ್ನೆ

    ಪ್ರತಿಷ್ಠೆಗಾಗಿ ವಿವಿಗಳನ್ನು ಆರಂಭಿಸುವ ಔಚಿತ್ಯವಾದರೂ ಏನಿದೆ?; ದಿನೇಶ್‌ ಗುಂಡೂರಾವ್‌ ಪ್ರಶ್ನೆ

    ಬೆಳಗಾವಿ: ಯಾವುದೇ ರೀತಿಯ ಕನಿಷ್ಟ ಮೂಲಸೌಲಭ್ಯಗಳನ್ನು ಒದಗಿಸದೆ ಕೇವಲ ಪ್ರತಿಷ್ಠೆಗಾಗಿ ವಿವಿಗಳನ್ನು ಆರಂಭಿಸುವ ಔಚಿತ್ಯವಾದರೂ ಏನಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದರು.

    Advertisement

    ಬಿಜೆಪಿಯ ಡಿ.ಎಸ್.ಅರುಣ್ ಅವರು, ಶಿವಮೊಗ್ಗದಲ್ಲಿ ಆರ್ಯವೇದಿಕ್ ಕಾಲೇಜು ನೆನೆಗುದಿಗೆ ಬಿದ್ದಿರುವ ಬಗ್ಗೆ ಆರೋಗ್ಯ ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡುವ ವೇಳೆ, ರಾಜ್ಯದ ಅನೇಕ ಕಡೆ ವಿವಿಗಳನ್ನು ಸ್ಥಾಪಿಸಿದ್ದೇವೆ. ಆದರೆ ಇಲ್ಲಿ ಕನಿಷ್ಟ ಮೂಲಭೂತ ಸರ‍್ಯಗಳಿಲ್ಲ. ಸಿಬ್ಬಂದಿ ಕೊರತೆ, ಸಂಶೋಧನಾಲಯ, ಗ್ರಂಥಾಲಯ, ಕ್ರೀಡಾಂಗಣ ಯಾವುದೇ ಸರ‍್ಯಗಳಿಲ್ಲದೆ ಅನೇಕ ವಿವಿಗಳು ಹಾಗೇ ಉಳಿದಿವೆ. ಇದೊಂದು ರೀತಿ ಬಿಳಿಯಾನೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಶಿವಮೊಗ್ಗದಲ್ಲಿ ರ‍್ಯುವೇದಿಕ್ ಕಾಲೇಜನ್ನು ೨೦೨೧-೨೨ನೇ ಸಾಲಿನ ಬಜೆಟ್ ನಲ್ಲಿ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿತ್ತು. ಅಂದು ಇದಕ್ಕಾಗಿ ೧೦೦ ಎಕರೆ ಜಮೀನನ್ನು ಸಹ ಮೀಸಲಿಡಲಾಗಿತ್ತು. ಈಗ ಇಲ್ಲಿ ಕೇವಲ ೮ ಎಕರೆ ೧೦ ಗುಂಟೆ ಜಮೀನು ಉಳಿದಿದೆ. ಬೇರೆ ಬೇರೆ ಯೋಜನೆಗಳಿಗೆ ಜಮೀನನ್ನು ವಶ ಪಡಿಸಿಕೊಳ್ಳಲಾಗದೆ ಎಂದು ಮಾಹಿತಿ ನೀಡಿದರು.

    ಒಂದು ವಿವಿಯನ್ನು ಸ್ಥಾಪನೆ ಮಾಡಬೇಕಾದರೆ ವಿಜಿಸಿ ಮಾರ್ಗಸೂಚಿ ಪ್ರಕಾರ ೧೦ ಎಕರೆ ಜಮೀನು ಇರಲೇಬೇಕು. ವಾಸ್ತವವಾಗಿ ವಿವಿಗಳಿಗೆ ಕನಿಷ್ಟ ಎಂದರೂ ೫೦ ಎಕರೆ ಜಮೀನು ಬೇಕಾಗುತ್ತದೆ. ಸಸಿಗಳನ್ನು ಬೆಳೆಸುವುದು, ಗ್ರಂಥಾಲಯ, ಸಿಬ್ಬಂದಿ ಹೀಗೆ ನಾನಾ ಕೆಲಸಗಳಿಗೆ ಕನಿಷ್ಟ ಪಕ್ಷ ೫೦ ಎಕರೆ ಜಮೀನು ಬೇಕು. ಮುಂದಿನ ದಿನಗಳಲ್ಲಿ ಇದರ ಪರಿಶೀಲನೆ ಮಾಡುವುದಾಗಿ ಆಶ್ವಾಸನೆ ಮಾಡಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading