Saturday, November 7, 2026
spot_img
More
    spot_img
    HomeLatest newsಇದು ಪ್ಲೇನ್ ಅಲ್ಲ!': ನೀವು ಬರ್ತಿದ್ದೀರಾ? ಕೇಳಿದ ಪ್ರಯಾಣಿಕನಿಗೆ ಊಬರ್ ಡ್ರೈವರ್ ಖಡಕ್ ಉತ್ತರ!

    ಇದು ಪ್ಲೇನ್ ಅಲ್ಲ!’: ನೀವು ಬರ್ತಿದ್ದೀರಾ? ಕೇಳಿದ ಪ್ರಯಾಣಿಕನಿಗೆ ಊಬರ್ ಡ್ರೈವರ್ ಖಡಕ್ ಉತ್ತರ!

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಯಾಣಿಕರು ಮೆಟ್ರೋ, ಬಿಎಂಟಿಸಿ, ಓಲಾ, ಊಬರ್ (Uber), ಮತ್ತು ರಾಪಿಡೋ (Rapido) ನಂತಹ ಆಪ್-ಆಧಾರಿತ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈ ಆಪ್‌ಗಳಲ್ಲಿ ಆಟೋ, ಕಾರ್ ಅಥವಾ ಬೈಕ್ ಬುಕ್ ಮಾಡಿದಾಗ, ಪ್ರಯಾಣಿಕರಿಗೆ ಚಾಲಕನ ವಿವರಗಳು ಮತ್ತು ಚಾಟ್ ಮಾಡುವ ಆಯ್ಕೆ ಸಿಗುತ್ತದೆ.ಸಾಮಾನ್ಯವಾಗಿ ಟ್ರಾಫಿಕ್‌ನಿಂದಾಗಿ ವಾಹನ ಬರುವುದು ತಡವಾದರೆ, ಚಾಲಕರು ಚಾಟ್ ಮೂಲಕ ಮಾಹಿತಿ ನೀಡುತ್ತಾರೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

    ಊಬರ್ ಡ್ರೈವರ್‌ನ ಆಶ್ಚರ್ಯಕರ ಪ್ರತಿಕ್ರಿಯೆ

    ಒಬ್ಬ ಬೆಂಗಳೂರಿನ ಪ್ರಯಾಣಿಕರು ಊಬರ್ ಕ್ಯಾಬ್ ಬುಕ್ ಮಾಡಿದ್ದರು. ವಾಹನ ತಲುಪಲು ಸ್ವಲ್ಪ ತಡವಾದಾಗ, ಆ ಪ್ರಯಾಣಿಕರು ಚಾಲಕನಿಗೆ ಸಾಮಾನ್ಯವಾಗಿ ಕೇಳುವಂತೆ, “ನೀವು ಬರುತ್ತಿದ್ದೀರಾ?” ಎಂದು ಮೆಸೇಜ್ ಕಳುಹಿಸಿದರು.

    ಆದರೆ ಚಾಲಕನಿಂದ ಬಂದ ಉತ್ತರದಿಂದ ಪ್ರಯಾಣಿಕರು ಒಂದು ಕ್ಷಣ ಅಚ್ಚರಿಗೊಂಡರು. ಚಾಲಕ ಕಳುಹಿಸಿದ ಸಂದೇಶ ಹೀಗಿತ್ತು,”ನಿಮಗೆ ಅರ್ಜೆಂಟ್ ಇದ್ದರೆ ಬೇರೆ ಕ್ಯಾಬ್ ಬುಕ್ ಮಾಡಿಕೊಳ್ಳಿ. ಇದು ಪ್ಲೇನ್ ಅಲ್ಲ!”

    ಈ ಸಂದೇಶದ ನಂತರ ಚಾಲಕ ತಕ್ಷಣ ಬುಕಿಂಗ್ ಅನ್ನು ರದ್ದುಗೊಳಿಸಿದ್ದಾರೆ! ಪ್ರಯಾಣಿಕರು ಈ ಅನುಭವದ ಸ್ಕ್ರೀನ್‌ಶಾಟ್ ಅನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಅದು ತಕ್ಷಣವೇ ವೈರಲ್ ಆಗಿದೆ.

    ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

    ಹಲವು ನೆಟ್ಟಿಗರು, ಬೆಂಗಳೂರಿನ ಟ್ರಾಫಿಕ್ ಸಾಮಾನ್ಯ. ಆದರೂ ಚಾಲಕ ಈ ರೀತಿ ಪ್ರತಿಕ್ರಿಯಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮತ್ತೊಬ್ಬರು, “ನಾನು ಒಮ್ಮೆ ಹೀಗೆ ಕೇಳಿದಾಗ ‘ಇದು ಹೆಲಿಕಾಪ್ಟರ್ ಅಲ್ಲ’ ಅಂತ ಹೇಳಿದ್ರು,” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಇನ್ನೊಂದೆಡೆ, ಕೆಲವು ನೆಟ್ಟಿಗರು ‘ಪ್ರಯಾಣಿಕರು ಏಕಕಾಲಕ್ಕೆ ಎರಡ್ಮೂರು ಆಪ್‌ಗಳಲ್ಲಿ ಬುಕ್ ಮಾಡಿ, ಮೊದಲು ಬಂದ ಕ್ಯಾಬ್ ಹತ್ತಿ ಉಳಿದದ್ದನ್ನು ರದ್ದು ಮಾಡುತ್ತಾರೆ. ಇದರಿಂದ ಚಾಲಕರಿಗೆ ನಷ್ಟವಾಗುತ್ತದೆ. ಅದಕ್ಕಾಗಿ ಅವರು ಸಿಟ್ಟಾಗಿದ್ದಾರೆ’ ಎಂದು ಚಾಲಕರ ಪರವೂ ವಾದಿಸಿದ್ದಾರೆ.

    ಒಟ್ಟಿನಲ್ಲಿ, ಈ ಒಂದು ಸಂದೇಶವು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಆಪ್ ಆಧಾರಿತ ಸಾರಿಗೆಯ ಅನುಭವಗಳು ಮತ್ತು ಚಾಲಕ-ಪ್ರಯಾಣಿಕರ ನಡುವಿನ ತಾಳ್ಮೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

    ಬಾತ್‌ರೂಮ್‌ನಲ್ಲಿ ಗೀಸರ್ ಗ್ಯಾಸ್ ದುರಂತ: ಬೆಂಗಳೂರಿನಲ್ಲಿ ತಾಯಿ-ಮಗು ಸಾವು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search