ನವದೆಹಲಿ: ಕೇಂದ್ರ ಸರ್ಕಾರವು ಇಂದು 1,73,030 ಕೋಟಿ ರೂಪಾಯಿಗಳ ತೆರಿಗೆ ಹಂಚಿಕೆಯನ್ನು ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿದೆ.
ಡಿಸೆಂಬರ್.2024ರಲ್ಲಿ 89,086 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿತ್ತು. ಇದೀಗ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಹಣಕ್ಕಿಂತ ದುಪ್ಪಟ್ಟು ಹಣ ಬಿಡುಗಡೆ ಮಾಡಿದೆ.
ಸದ್ಯ ಬಿಡುಗಡೆಯಾಗಿರುವ ಹಣದಲ್ಲಿ ಕರ್ನಾಟಕಕ್ಕೆ ಕೂಟ ಬಂಪರ್ ಹಣ ಸಿಕ್ಕಿದೆ.
ಜಿಎಸ್‌ಟಿ ತೆರಿಗೆ ಹಂಚಿಕೆಯಲ್ಲಿ ಈ ಬಾರಿ ಕೂಡ ಉತ್ತರ ಪ್ರದೇಶ ರಾಜ್ಯಕ್ಕೆ 31,039.84 ಕೋಟಿ ಹಣ ನೀಡುವ ಮೂಲಕ ಈ ಬಾರಿಯೂ ಈ ರಾಜ್ಯಕ್ಕೆ ಸಿಂಹಪಾಲು ಸಿಕ್ಕಂತಾಗಿದೆ. ಇನ್ನೂ ಕರ್ನಾಟಕಕ್ಕೆ ಈ ಬಾರಿ 6,310.40 ಕೋಟಿ ಹಣ ನೀಡಲಾಗಿದೆ.
ಬಂಡವಾಳ ವೆಚ್ಚವನ್ನು ವೇಗಗೊಳಿಸುವಂತೆ ಮತ್ತು ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇಂದು ಘೋಷಣೆ ಮಾಡಿದ ಜಿಎಸ್‌ಟಿ ಟ್ಯಾಕ್ಸ್ ಪ್ಯಾಕೇಜ್‌ನಲ್ಲಿ ಒಟ್ಟು 26 ರಾಜ್ಯಗಳಿಗೆ ಹಣ ವಿತರಿಸಲಾಗಿದೆ.
ಇನ್ನು ಪಶ್ಚಿಮ ಬಂಗಾಳಕ್ಕೆ 13,017.06 ಕೋಟಿ, ಆಂಧ್ರಪ್ರದೇಶಕ್ಕೆ 7,002.52 ಕೋಟಿ, ಕರ್ನಾಟಕಕ್ಕೆ 6,310.40 ಕೋಟಿ, ಅಸ್ಸಾಂಗೆ 5412.38 ಕೋಟಿ, ಛತ್ತೀಸ್‌ಗಢಕ್ಕೆ 5,895.13 ಕೋಟಿ, ಕೇರಳಕ್ಕೆ 30 ಕೋಟಿ, ತಮಿಳುನಾಡಿಗೆ 7,057.89 ಕೋಟಿ ರೂ ಬಿಡುಗಡೆ ಮಾಡಿದ್ದಾರೆ.
ಹಣಕಾಸು ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ನಿಯಮಿತ ಕಂತುಗಳಲ್ಲಿ ರಾಜ್ಯಗಳಿಗೆ ತೆರಿಗೆಗಳನ್ನು ವಿತರಿಸುತ್ತದೆ. ನಿಗಮ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಕೇಂದ್ರ ಜಿಎಸ್‌ಟಿ ಸೇರಿದಂತೆ ಎಲ್ಲಾ ತೆರಿಗೆಗಳ ಒಟ್ಟು ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


