ವಿಜಯಪುರ: ರಾಜ್ಯ ಸಾವಿನ ಮನೆಯಾಗಿದ್ದರೂ ಸರ್ಕಾರ ಮಾತ್ರ ಸಂಬಂಧವಿಲ್ಲದ ರೀತಿಯಲ್ಲಿದೆ. ಇದರ ಜೊತೆಗೆ ಡಿನ್ನರ್ ಪಾರ್ಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾವಿನ ಮನೆಯಾಗಿದೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವಿಗೆ ಕಾರಣವೇ ಗೊತ್ತಾಗುತ್ತಿಲ್ಲ. ರೈತರ ಆತ್ಮಹತ್ಯೆಗಳಾಗುತ್ತಿವೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಳುವ ಸರ್ಕಾರಕ್ಕೆ ಇದೆಲ್ಲಾ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ರಾಜ್ಯ ಸಾವಿನ ಮನೆಯಾಗಿದ್ದರೂ ಸರ್ಕಾರ ಸಂಬಂಧವಿಲ್ಲದ ರೀತಿಯಲ್ಲಿದೆ. ಇವರು ಡಿನ್ನರ್ ಪಾರ್ಟಿ ನಡೆಸಿದ್ದಾರೆ. ಕರುಣೆ ಇದ್ದರೆ ಬಾಣಂತಿಯರ ಸಾವಿಗೆ ಕಾರಣ ಕಂಡುಕೊಳ್ಳಲಿ. ಸಾವಿನ ಸರಣಿ ಇನ್ನೂ ನಿಂತಿಲ್ಲ. ಸಾವುಗಳಿಗೆ ಆಸ್ಪತ್ರೆ, ಔಷಧ, ವೈದ್ಯರು ಯಾರು ಕಾರಣ ಎಂಬುವುದನ್ನು ಕಂಡುಕೊಳ್ಳಲಿ ಎಂದು ಕಿಡಿಕಾರಿದರು.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಕಲ್ಲಿನ ಹೃದಯದವರಾಗಿದ್ದಾರೆ. ಬಾಣಂತಿಯರ ಸಾವಿನ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತಜ್ಞರ ಸಮಿತಿ ಆಗಲಿ. ಸರ್ಕಾರದ ಸಚಿವರ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಕಿಡಿಕಾರಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


