ಪುತ್ತೂರು: ಬೈಕ್‌ನಲ್ಲಿ ಚಲಿಸುತ್ತಿರುವಾಗ ಬಿದ್ದು ಅರ್ಚಕರನ್ನು ಕಂಡ ಮಸೀದಿಯಲ್ಲಿದ್ದವರು ಗಾಯಗೊಂಡ ಅವರನ್ನು ಕರೆದುಕೊಂಡು ಹೋಗಿ ಮಸೀದಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ.
ನೆಟ್ಟಣಿಗೆ ಮೂಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಇರುವ ಮುಂಡ್ಯದ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ್ ಭಟ್ ಬುಧವಾರ (ಜನವರಿ 8) ಬೈಕ್‌ನಲ್ಲಿ ತೆರಳುತ್ತಿರುವಾಗ ಕುಂಬ್ರದ ಬದ್ರಿಯಾ ಮಸೀದಿ ಎದುರು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು.
ಬೈಕ್‌ನಿಂದ ಬಿದ್ದ ರಘುರಾಮ್ ಭಟ್ ಅವರ ಕಾಲಿಗೆ ಪೆಟ್ಟಾಗಿ ರಕ್ತಸ್ರಾವವಾಗುತ್ತಿತ್ತು. ಈ ಸಂದರ್ಭದಲ್ಲಿ ಮಸೀದಿಯಲ್ಲಿದ್ದವರು ಪ್ರಥಮ ಚಿಕಿತ್ಸೆ ಮಾಡಿ ಉಪಚರಿಸಿದರು. ಬಳಿಕ ಬಷೀರ್ ಕಡ್ತಿಮಾರ್ ತನ್ನ ಆಟೋ ರಿಕ್ಷಾದಲ್ಲಿ ರಘುರಾಮ್ ಭಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಇನ್ನು ಆಸ್ಪತ್ರೆ ಚಿಕಿತ್ಸೆ ಮುಗಿಸಿ ತನ್ನ ಬೈಕ್ ಇದ್ದ ಮಸೀದಿ ಬಳಿಗೆ ಮರಳಿದ ಅರ್ಚಕ ರಘುರಾಮ್ ಭಟ್ ಅವರು ಸುಮಾರು ಎರಡು ಗಂಟೆಗಳ ಕಾಲ ಮಸೀದಿಯಲ್ಲಿಯೇ ವಿಶ್ರಾಂತಿ ಪಡೆದಿದ್ದು, ಬಳಿಕ ಅವರ ಆಪ್ತರು ಮನೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


