ಬೆಂಗಳೂರು: ಡಿಕೆಶಿ ಎರಡೂವರೆ ವರ್ಷ ಯಾಕೆ ಮುಂದಿನ ಮೂರು ವರ್ಷಗಳ ಕಾಲ ಸಿಎಂ ಆಗಲಿ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರೇ ಮುಂದಿನ ಎರಡೂವರೆ ವರ್ಷ ಯಾಕೆ ಪ್ರಯತ್ನ ಮಾಡುತ್ತಿದ್ದೀರಾ? ಮುಂದಿನ ಮೂರು ವರ್ಷದ ಅವಧಿಗೆ ಸಿಎಂ ಆಗಿ ಎಂದು ಸಲಹೆ ನೀಡಿದ್ದಾರೆ.
ಡಿಕೆಶಿ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಸಿಎಂ ಆಗೇ ಬಿಡುತ್ತಾರೆ ಅಂತಾನೂ ಹೇಳಿಲ್ಲ. ಸಿಎಂ ಆಗಲ್ಲ ಅಂತಾನೂ ಹೇಳಿಲ್ಲ. ಅವರ ಹಣೆಯಲ್ಲಿ ಬರೆದಿದ್ದರೆ ಆಗ್ತಾರೆ ಎಂದಿದ್ದಾರೆ. ಹಣೆಯಲ್ಲಿ ಬರೆದಿದ್ದರೆ ಆಗುತ್ತದೆ. ಎಲ್ಲರದ್ದೂ ವಿಧಿ ಏನು ಎಂದು ಮೊದಲೇ ತೀರ್ಮಾನ ಆಗಿರುತ್ತದೆ. ಅದರ ಪ್ರಕಾರ ಆಗುತ್ತದೆ. ಡಿಕೆಶಿ ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಾ? ಮುಂದಿನ ಮೂರು ವರ್ಷದ ಅವಧಿಗೆ ಸಿಎಂ ಆಗಲಿ ಎಂದು ಸಲಹೆ ನೀಡಿದರು.
ಇನ್ನು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, ಎಚ್‌ಡಿಕೆ ಕಾಲದಲ್ಲಿ ರೇಡ್ ಕಾರ್ಡ್ ಎಷ್ಟಿತ್ತು ಅಂತಾ ಹೇಳಬೇಕಲ್ಲ. ಈ ದೇಶದಲ್ಲಿ 90% ರಾಜಕಾರಣಿಗಳು ಭ್ರಷ್ಟರೆ, ಎಲ್ಲಿಂದ ದುಡ್ಡು ತರ್ತಾರೆ ಮನೆಯಿಂದ ಕೊಡ್ತಾರಾ? ಬೇರೆಯವರ ಹತ್ತಿರ ತಗೊಂಡು ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


