ದೊಡ್ಡಪತ್ರೆ ಔಷಧೀಯ ಗುಣವುಳ್ಳ ಈ ಸಸ್ಯ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಂಡು ಬರುತ್ತದೆ.ಸ್ಟ್ರೀಟ್ ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ನಮ್ಮ ಮನೆಯ ಸುತ್ತಲಿರುವ ಔಷಧೀಯ ಗುಣಗಳಿರುವ ಸೊಪ್ಪುಗಳನ್ನು ಬಳಸಿಕೊಂಡು ಖಾದ್ಯಗಳನ್ನು ತಯಾರಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ, ಹಾಗಾದರೆ ಯಾವುದು ಆ ಔಷಧೀಯ ಗುಣವಿರುವ ಎಲೆ ಅಂತೀರಾ ಅದೇ ದೊಡ್ಡ ಪತ್ರೆ…ದೊಡ್ಡ ಪತ್ರೆಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡ ಪತ್ರೆ ಎಲೆ ಉತ್ತಮ ಮನೆ ಮದ್ದಾಗಿದ್ದು, ತಲೆನೋವು, ಶೀತದಂತ ರೋಗಗಳಿಗೆ ಸೂಕ್ತವಾದ ಮದ್ದು ಅಂದರೆ ದೊಡ್ಡಪತ್ರೆ,ದೊಡ್ಡಪತ್ರೆ ಎಲೆಗಳಿಂದ ಚಟ್ನಿ, ತಂಬುಳಿಯಂಥ ರೆಸಿಪಿಗಳನ್ನೂ ಮಾಡಿಕೊಳ್ಳಬಹುದು ಮತ್ತು ಒಂದಷ್ಟು ರೆಸಿಪಿಗಳಿಗೆ ಫ್ಲೆವರ್‌ಗಾಗಿ, ಸುವಾಸನೆಗಾಗಿ ಇವುಗಳನ್ನ ಬಳಸಬಹುದು.ಗಡಿ, ಕೆಮ್ಮು, ಜ್ವರ, ಕಫ ದೂರವಾಗಿಸುವ ಅಜವಾನದ ಚಟ್ನಿ ಮಾಡುವುದು ಹೇಗೆ? ಬೇಕಾಗುವ ಪದಾರ್ಥಗಳು ಹಾಗೂ ತಯಾರಿಸುವ ವಿಧಾನ ಹೇಗೆ? ನೋಡೋಣ.
ಬೇಕಾಗುವ ಸಾಮಗ್ರಿಗಳು:
ಅಜವಾನದ ಎಲೆಗಳು – 25
ಎಳ್ಳು – 1 ಟೀಸ್ಪೂನ್
ಎಣ್ಣೆ – 4 ಟೀಸ್ಪೂನ್
ಶೇಂಗಾ – 1 ಟೀಸ್ಪೂನ್
ನೆನೆಸಿದ ಕಡಲೆಬೇಳೆ – 1 ಟೀಸ್ಪೂನ್
ಉದ್ದಿನಬೇಳೆ- 1 ಟೀಸ್ಪೂನ್
ಧನಿಯಾ – 1 ಟೀಸ್ಪೂನ್
ಒಣ ಕೆಂಪುಮೆಣಸಿನಕಾಯಿ – 10
ಹುಣಸೆಹಣ್ಣು – ನಿಂಬೆ ಗಾತ್ರದಷ್ಟು
ಅರಿಶಿನ – ಚಿಟಿಕೆ
ಜೀರಿಗೆ – ಅರ್ಧ ಟೀ ಚಮಚ
ಬೆಳ್ಳುಳ್ಳಿ ಎಸಳು – 5
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
- ಎಲೆಗಳನ್ನು ಒಂದು ಗಾಜಿನ ಬೌಲ್ನಲ್ಲಿ ಹಾಕಿ ಕ್ಲೀನ್ ಮಾಡಿಕೊಳ್ಳಿ ನಂತರ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ರುಬ್ಬುವಾಗ ಹಸಿ ಮೆಣಸು ಹಾಕಿ,ಹುರಿದ ಎಳ್ಳು, ಶೇಂಗಾ, ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕಾಗುತ್ತದೆ.
- ಬ್ಲೆಂಡರ್‌ನಲ್ಲಿ ಸರಿಯಾಗಿ ಮಿಶ್ರಣವಾಗುವವರೆಗೆ ಸರಿಯಾಗಿ ರುಬ್ಬಿ.
- ಜೀರಿಗೆ, ಬೆಳ್ಳುಳ್ಳಿ,ಉದ್ದಿನಬೇಳೆ,ಧನಿಯಾ, ಮತ್ತು ಒಣ ಮೆಣಸನ್ನು ಎಣ್ಣೆಯಲ್ಲಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
- ರುಚಿಗೆ ಅನುಸಾರವಾಗಿ ಉಪ್ಪು ಹಾಕಿ ಮಿಶ್ರಣವನ್ನು ಚೆನ್ನಾಗಿ ಕಲಕಿ,ಕೊನೆಗೆ ಇಂಗು ಸೇರಿಸಿ ಹಾಗೂ ಈ ಒಗ್ಗರಣೆಯನ್ನು ಚಟ್ನಿಯೊಂದಿಗೆ ಸೇರಿಸಿ ಮಿಶ್ರಣ ಮಾಡಿ. ಆಗ ರುಚಿಕರ & ಆರೋಗ್ಯಕರವಾದ ಅಜವಾನ ಎಲೆ ಅಥವಾ ದೊಡ್ಡಪತ್ರೆ ಚಟ್ನಿ ರೆಡಿ. ಇಷ್ಟವಾದರೆ ಒಮ್ಮೆ ಟ್ರೈ ಮಾಡಿ ನೋಡಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


