Tuesday, August 11, 2026
spot_img
More
    spot_img
    HomeLatest newsSUMMER SPECIAL:ಬೇಸಿಗೆಯ ತಾಪವನ್ನು ತಗ್ಗಿಸಲು ಪರಿಪೂರ್ಣ ಹಣ್ಣು!

    SUMMER SPECIAL:ಬೇಸಿಗೆಯ ತಾಪವನ್ನು ತಗ್ಗಿಸಲು ಪರಿಪೂರ್ಣ ಹಣ್ಣು!

    ಬೇಸಿಗೆಯಲ್ಲಿ ಕರ್ಬೂಜ ಹಣ್ಣು ಕಲ್ಲಂಗಡಿಯಂತೆಯೇ ಸಿಕ್ಕಾಪಟ್ಟೆ ಫೇಮಸ್. ಈ ಕಾಲದಲ್ಲಿ ಜನರು ಕರ್ಬೂಜ ಹಣ್ಣು ತಿನ್ನಲು ಬಹಳ ಇಷ್ಟಪಡುತ್ತಾರೆ, ಏಕೆಂದರೆ ಇದು ದೇಹಕ್ಕೆ ತಂಪು ನೀಡುವ ಜೊತೆಗೆ ಹಲವಾರು ಆರೋಗ್ಯ ಲಾಭಗಳನ್ನು ಒದಗಿಸುತ್ತದೆ.ಕರ್ಬೂಜ ಹಣ್ಣು ಅಥವಾ ಪಾನಕ ಸೇವನೆಯಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಗ್ಗಿಸಬಹುದು. ಇದರಲ್ಲಿರುವ ಫೈಬರ್‌ ಅಂಶವು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಶೇಕಡಾ 90ರಷ್ಟು ನೀರಿನ ಅಂಶವಿರುವ ಈ ಹಣ್ಣು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಉತ್ತಮ ಆಯ್ಕೆಯಾಗುತ್ತದೆ. ಇದನ್ನು ಸೇವಿಸುವುದರಿಂದ ದೇಹದ ಜಲಶೋಷಣೆಯನ್ನು ತಡೆಯಲು, ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.ಎಲ್ಲ ಕಾಲಕ್ಕೂ, ಎಲ್ಲ ರೀತಿಯ ದೇಹ ಪ್ರಕೃತಿಯ ಜನರಿಗೆ ಕರ್ಬೂಜ ಒಂದು ಪರಿಪೂರ್ಣ ಹಣ್ಣು. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನೂ ಒಳಗೊಂಡಿರುತ್ತದೆ. ಕೇವಲ ರುಚಿಕರ ಮಾತ್ರವಲ್ಲದೆ, ಇದರ ತಾಜಾ ಪರಿಮಳವೂ ಎಲ್ಲರ ಮನಸೆಳೆಯುತ್ತದೆ.

    Advertisement

    ಹೃದಯ ಸಂಬಂಧಿ ಕಾಯಿಲೆಗಳಿಂದ ಪರಿಹಾರ

    ಫೋಲಿಕ್ ಆಮ್ಲವು ಕರ್ಬೂಜದಲ್ಲಿ ಕಂಡುಬರುತ್ತದೆ, ಇದು ನಿಮ್ಮ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ. ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ಸೇವಿಸಬೇಕು.ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾದ ಅಸಿಡಿಟಿಯನ್ನು ದೂರ ಮಾಡಿ ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ. ಕೆಲವು ಆಹಾರ ತಜ್ಞರ ಪ್ರಕಾರ ಕರ್ಬುಜ ಹಣ್ಣು ತನ್ನಲ್ಲಿನ ವಿಶಿಷ್ಟ ಗುಣ ಲಕ್ಷಣಗಳಿಂದ ಹೊಟ್ಟೆಗೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳನ್ನು ( ಹೊಟ್ಟೆಯ ಹುಣ್ಣು ಸೇರಿದಂತೆ ) ಇದರ ನಿತ್ಯ ನಿಯಮಿತ ಸೇವನೆಯಿಂದ ಸುಲಭವಾಗಿ ಬಗೆಹರಿಸುತ್ತದೆ.

    ಕಣ್ಣಿನ ಸಂಬಂಧಿ ಸಮಸ್ಯೆಗಳೂ ನಿವಾರಣೆಯಾಗುತ್ತವೆ

    ಕರ್ಬೂಜ ಹಣ್ಣು ಸೇವನೆಯಿಂದ ಕಣ್ಣಿನ ಸಂಬಂಧಿ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ವಿಟಮಿನ್ A ಬೀಟಾ-ಕ್ಯಾರೋಟಿನ್ ಈ ಹಣ್ಣಿನಲ್ಲಿ ಕಂಡುಬರುತ್ತದೆ. ಇದು ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಅವುಗಳನ್ನು ಆರೋಗ್ಯಕರವಾಗಿರಿಸುತ್ತದೆ. ನೀವು ಇದನ್ನು ಪ್ರತಿದಿನ ಸೇವಿಸಬೇಕು. ಕಣ್ಣಿನ ಪೊರೆ ಅಪಾಯವನ್ನು ಕಡಿಮೆ ಮಾಡಲು ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ.

    ತೂಕ ಇಳಿಸಲು ಸಹಕಾರಿ

    ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಕರ್ಬೂಜವನ್ನು ಸೇವಿಸಿ. ಈ ಹಣ್ಣಿನಲ್ಲಿ ಶೇ. 90ರಷ್ಟು ನೀರಿನ ಅಂಶವಿದೆ. ಇದು ಫೈಬರ್‌ನಿಂದ ತುಂಬಿರುತ್ತದೆ.ಕರ್ಬೂಜ ಹಣ್ಣಿನಲ್ಲಿ ಸೋಡಿಯಂ ಅಂಶ ಕಡಿಮೆ ಇದ್ದು, ಇದು ಕೊಲೆಸ್ಟ್ರಾಲ್ ರಹಿತ ಹಣ್ನಾಗಿದೆ. ಕ್ಯಾಲೋರಿಗಳು ಸಹ ಕಡಿಮೆ ಇರುವುದರಿಂದ, ಇದನ್ನು ತಿಂದರೆ ಹೊಟ್ಟೆ ತುಂಬಲಿದ್ದು, ಜೊತೆಗೆ ಹೆಚ್ಚಿನ ಪ್ರಮಾಣದ ನೀರಿನ ಅಂಶದ ಕಾರಣದಿಂದ ಇದು ನಿಮ್ಮ ಹೊಟ್ಟೆ ಹಸಿವನ್ನು ಸಹ ನಿಯಂತ್ರಣ ಮಾಡುವುದರಿಂದ ತೂಕ ಹೆಚ್ಚಾಗದಂತೆ ನೋಡುಕೊಳ್ಳುವುದರೊಂದಿಗೆ ಇಳಿಕೆಗೂ ಸಹಕಾರಿಯಾಗಿದೆ.ಇದರಲ್ಲಿರುವ ಅತಿ ಹೆಚ್ಚಿನ ನೀರಿನ ಅಂಶ ಮನುಷ್ಯನ ದೇಹವನ್ನು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಇದರಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣದಿಂದ ನಮ್ಮ ದೇಹದ ಕ್ಯಾಲೋರಿಗಳನ್ನು ಹತೋಟಿಯಲ್ಲಿರುವಂತೆ ಮಾಡುತ್ತದೆ.ಆಹಾರ ಪದ್ಧತಿಯಲ್ಲಿ ಕರ್ಬುಜ ಹಣ್ಣನ್ನು ಸೇರಿಸಿ ಕೊಳ್ಳುವುದು ಬಹಳ ಉತ್ತಮ. ಏಕೆಂದರೆ ಇದು ಹೊಟ್ಟೆ ಹಸಿವು ನಿವಾರಣೆ ಮಾಡುತ್ತದೆ.

    ಮಲಬದ್ಧತೆ ಸಮಸ್ಯೆ ದೂರ

    ಕರ್ಬೂಜ ಹಣ್ಣು ನಾರಿನ ಪ್ರಮಾಣ ಹೆಚ್ಚಾಗಿ ಒಳಗೊಂಡಿರುತ್ತದೆ ಮತ್ತು ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಮಲವಿಸರ್ಜನೆ ಕೂಡ ಸರಾಗವಾಗಿ ಆಗುತ್ತದೆ.ಹೀಗಾಗಿ ಒಂದು ವೇಳೆ ನೀವು ನಾರಿನ ಅಂಶ ಮತ್ತು ನೀರಿನ ಪ್ರಮಾಣ ಹೆಚ್ಚಾಗಿರುವ ಯಾವುದಾದರೂ ಹಣ್ಣನ್ನು ಬೇಸಿಗೆ ಯಲ್ಲಿ ಸೇವಿಸಬೇಕು ಎಂದರೆ ಅದಕ್ಕೆ ಕರ್ಬೂಜದ ಹಣ್ಣು ಒಂದು ಒಳ್ಳೆಯ ಉದಾಹರಣೆ.

    ​ರಕ್ತದ ಒತ್ತಡವನ್ನು ನಿಯಂತ್ರಣ ಮಾಡುತ್ತದೆ


    ಪೊಟ್ಯಾಶಿಯಮ್ ಪ್ರಮಾಣ ಹೆಚ್ಚಾಗಿರುವ ಕರ್ಬೂಜದ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಉಂಟಾಗುತ್ತದೆ.ನಮ್ಮ ರಕ್ತದ ಹರಿವನ್ನು ದೇಹದಲ್ಲಿ ಹೆಚ್ಚು ಮಾಡುವುದರ ಜೊತೆಗೆ ರಕ್ತದ ಒತ್ತಡವನ್ನು ಸಹ ಕಂಟ್ರೋಲ್ ಮಾಡುತ್ತದೆ. ಇದರಿಂದ ಸಹಜವಾಗಿ ಹೃದಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಗಳು ಮತ್ತು ಪಾರ್ಶ್ವವಾಯು ಸಮಸ್ಯೆ ದೂರವಾಗುತ್ತದೆ.

    ಕ್ಯಾನ್ಸರ್ ವಿರೋಧಿ ಲಕ್ಷಣಗಳಿವೆ

    ಕರ್ಬೂಜದ ಹಣ್ಣಿನಲ್ಲಿ ಮೊದಲೇ ಹೇಳಿದಂತೆ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಪ್ರಮಾಣ ಇರುವುದರಿಂದ ಇದು ನಮ್ಮ ಜೀವಕೋಶಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ.ಅಂದರೆ ಫ್ರೀ ರಾಡಿಕಲ್ ಗಳ ಪ್ರಮಾಣದಿಂದ ಕ್ಯಾನ್ಸರ್ ರೂಪಕ್ಕೆ ತಿರುಗುವ ಜೀವಕೋಶಗಳು ಇದರಿಂದ ರಕ್ಷಣೆಯಾಗುತ್ತವೆ. ಇದರಿಂದ ಸಹಜವಾಗಿ ನಮ್ಮ ದೇಹದಲ್ಲಿ ಕರುಳಿನ ಕ್ಯಾನ್ಸರ್, ಪ್ರಾಸ್ಟೆಟ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ಗಳ ಸಮಸ್ಯೆ ಇರುವುದಿಲ್ಲ.​

    ಕಿಡ್ನಿ ಸ್ಟೋನ್ ಸಮಸ್ಯೆ ತೊಂದರೆ

    ಇದರಿಂದ ಪರಿಹಾರ ಪಡೆಯಲು ಅನೇಕರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಪ್ರತಿನಿತ್ಯ ಕರ್ಬೂಜ ಹಣ್ಣನ್ನು ಸೇವಿಸಿದರೆ ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದಲೂ ಪರಿಹಾರ ಸಿಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading