ಬೆಂಗಳೂರು: ನಿನ್ನೆ ( ಮಾರ್ಚ್ 9 ) ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ನ್ಯೂಜಿಲೆಂಡ್ ನೀಡಿದ 252 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತದ ಗೆಲುವಿನ ಹಾದಿ ಸುಲಭವಿರಲಿಲ್ಲ. ವಿಕೆಟ್ ಕಳೆದುಕೊಳ್ಳದೇ ಶತಕದ ಆರಂಭ ಸಿಕ್ಕರೂ ಸಹ ಕೊನೆಗೆ ತಂಡದ ಪರ ಯಾರಾದರೊಬ್ಬ ಗೆಲುವಿನ ದಡ ಸೇರಿಸಲೇಬೇಕಾದ ಅನಿವಾರ್ಯತೆ ಇತ್ತು.
ಪಿಚ್‌ಗೆ ಹೊಂದಿಕೊಂಡಿದ್ದ ಶ್ರೇಯಸ್ ಐಯ್ಯರ್ ನಿರ್ಗಮಿಸಿದ ಬಳಿಕ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಸಹ ಔಟ್ ಆದರು. ಆದರೆ ಕೆಎಲ್ ರಾಹುಲ್ ಅಜೇಯರಾಗಿ ಉಳಿದು ಕೊನೆಗೆ ಜಡೇಜಾ ಜತೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಹೀಗೆ ಜಡೇಜಾ ವಿಕೆಟ್ ಹೋದರೆ ಇನ್ಯಾವುದೇ ಬ್ಯಾಟ್ಸ್‌ಮನ್ ಇಲ್ಲ ಎನ್ನುವ ಕಠಿಣ ಪರಿಸ್ಥಿತಿಗೆ ತಂಡ ಬಂದು ತಲುಪಿತ್ತಾದರೂ ಕಣದಲ್ಲಿದ್ದ ಕೆಎಲ್ ರಾಹುಲ್ ಮೇಲೆ ಎಲ್ಲರ ನಂಬಿಕೆ ಇತ್ತು. ಈ ನಂಬಿಕೆಯನ್ನು ಕೆಎಲ್ ರಾಹುಲ್ ಹುಸಿ ಮಾಡಲಿಲ್ಲ. 33 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿ ತಂಡದ ಪರ ಅತ್ಯಮೂಲ್ಯ ಆಟವನ್ನಾಡಿದರು.
ಹೀಗೆ ನಿನ್ನೆಯ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಆತಂಕ ಶುರುವಾಗುತ್ತಿದ್ದಂತೆಯೇ ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು ‘ಕೆಎಲ್ ರಾಹುಲ್ ಕಾಪಾಡು ಬ್ರೋ’ ಎಂದು ಬರೆದಿದ್ದ ಬೋರ್ಡ್ ಪ್ರದರ್ಶಿಸಿದ್ದರು.
ಈ ಫೋಟೊವನ್ನು ಹಂಚಿಕೊಂಡಿರುವ ಹುಬ್ಬಳ್ಳಿ – ಧಾರವಾಡ ಪೊಲೀಸರು ‘ನೆನಪಿಡಿ ಸಂಕಷ್ಟದ ಸಮಯದಲ್ಲಿ ಜೆರ್ಸಿ ನಂಬರ್ 1 ಹಾಗೂ ಸಹಾಯವಾಣಿ 112 ಯಾವಾಗಲೂ ಸಹಾಯಕ್ಕೆ ಬರುತ್ತವೆ’ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


