ಅಂಬಾಟಿ ರಾಯುಡು. ಆಟಗಾರನಾಗಿ ಮೈದಾನಕ್ಕೆ ಇಳಿಯುತ್ತಿದ್ದಾಗ ಇದ್ದ ಪ್ರೀತಿ ಹಾಗೂ ಅಭಿಮಾನಕ್ಕೆ ಸದ್ಯ ದುಪ್ಪಟ್ಟು ಹೆಚ್ಚಿನ ವಿರೋಧಿಗಳನ್ನು ಹೊಂದಿರುವ ಕ್ರಿಕೆಟಿಗ.
ಬಹುತೇಕ ಕ್ರಿಕೆಟರ್‌ಗಳನ್ನು ನಿವೃತ್ತಿಯ ನಂತರ ವೈರಿಗಳೂ ಪ್ರೀತಿಸಲು ಆರಂಭಿಸುತ್ತಾರೆ. ಆದರೆ ರಾಯುಡು ವಿಚಾರದಲ್ಲಿ ಇದು ತದ್ವಿರುದ್ಧ. ಇದಕ್ಕೆ ಕಾರಣ ಓರ್ವ ಕ್ರಿಕೆಟಿಗನಾಗಿ ಕ್ರೀಡಾ ಸ್ಪೂರ್ತಿ ಇಲ್ಲದ ರಾಯುಡು ಯಾವಾಗಲೂ ಚೆನ್ನೈ ಸೂಪರ್ ಕಿಂಗ್ಸ್, ಅದರಲ್ಲೂ ಎಂಎಸ್ ಧೋನಿ ಭಜನೆ ಮಾಡುವುದು.
ಆರೆಂಜ್ ಕ್ಯಾಪ್ ಗೆಲ್ಲುವುದೇನು ಮಹಾ ಎಂದು ನಾಲಿಗೆಹರಿಬಿಟ್ಟು ಕ್ರಿಕೆಟ್ ದಿಗ್ಗಜ ಕೆವಿನ್ ಪೀಟರ್ಸನ್ ಬಾಯಿಂದ ಜೋಕರ್ ಎನಿಸಿಕೊಂಡಿದ್ದ ರಾಯುಡು ಈಗಲೂ ಧೋನಿ ವಿಚಾರವಾಗಿ ಹಿಂದೆ ಭಾರತದ ಯಾವುದೇ ಕ್ರಿಕೆಟಿಗನೂ ಆಗದಷ್ಟು ಕೆಳಮಟ್ಟದಲ್ಲಿ ಟೀಕೆಗೊಳಗಾಗಿದ್ದಾರೆ.
ಇನ್ನು ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳನ್ನು ಹಲವಾರು ಬಾರಿ ಕೆಣಕಿರುವ ರಾಯುಡು ಇನ್ನೂ ದೊಡ್ಡ ಮಟ್ಟದಲ್ಲಿ ಟ್ರೋಲ್‌ಗೀಡಾಗಿದ್ದಾರೆ.
ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿ ಗೆದ್ದಾಗಲೆಲ್ಲ ಹಾಗೂ ಸಿಎಸ್‌ಕೆ ಸೋತಾಗಲೆಲ್ಲ ಟ್ರೋಲ್‌ಗೊಳಗಾಗುತ್ತಿರುವ ಅಂಬಾಟಿ ರಾಯುಡು ಸದ್ಯ ಆ ವಿಚಾರದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಾನು ಅಂದಿಗೂ ತಲಾ ಫ್ಯಾನ್, ಈಗಲೂ ತಲಾ ಫ್ಯಾನ್, ಮುಂದೆ ಎಂದೆಂದಿಗೂ ತಲಾ ಫ್ಯಾನ್ ಎಂದು ಮೊದಲಿಗೆ ಬರೆದಿರುವ ರಾಯುಡು ಯಾರು ಏನು ಬೇಕಾದರೂ ಅಂದುಕೊಳ್ಳಲಿ ಹಾಗೂ ಏನು ಬೇಕಾದರೂ ಮಾಡಲಿ ಅದರಲ್ಲಿ ಒಂದು ಪರ್ಸೆಂಟ್ ಸಹ ಬದಲಾಗಲ್ಲ. ಹಾಗಾಗಿ ದಯವಿಟ್ಟು ದುಡ್ಡು ಕೊಟ್ಟು ನನ್ನ ವಿರುದ್ಧ ಟ್ರೋಲ್ ಮಾಡುವುದನ್ನು ನಿಲ್ಲಿಸಿ, ಅದೇ ದುಡ್ಡಲ್ಲಿ ದಾನ ಮಾಡಿ ಕೆಲವರಿಗೆ ಸಹಾಯವಾದರೂ ಆಗುತ್ತೆ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


