ಬೆಂಗಳೂರು: ಕಳೆದ ಮೂರ್ನಾಲ್ಕು ವಾರಗಳಿಂದ ಸತತವಾಗಿ ಒಂದಲ್ಲ ಒಂದು ವಸ್ತು ಹಾಗೂ ಸೇವೆಯ ಬೆಲೆ ಏರಿಕೆಯಾಗುತ್ತಲೇ ಬರುತ್ತಿದೆ.
ರಾಜ್ಯದಲ್ಲಿ ಬಸ್ ದರ, ಹಾಲು, ವಿದ್ಯುತ್ ದರ ಏರಿಕೆಯಾಗಿದ್ದು ಮಾತ್ರವಲ್ಲದೇ ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ ವಿಧಿಸಲಾಗಿದೆ ಹಾಗೂ ಕುಡಿಯುವ ನೀರಿನ ಶುಲ್ಕವನ್ನೂ ಸಹ ಹೆಚ್ಚಿಸಲಾಗಿದೆ. ಅತ್ತ ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಿತ್ತು.
ಹೀಗೆ ಸಾಲು ಸಾಲು ಬೆಲೆ ಏರಿಕೆಗಳಿಂದ ಬಳಲಿರುವ ಜನತೆಗೆ ಇದೀಗ ಮತ್ತೊಂದು ಬೆಲೆ ಏರಿಕೆಯ ಬರೆ ಬಿದ್ದಿದೆ. ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಖಾಸಗಿ ಶಾಲಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಈ ಮಾಹಿತಿಯನ್ನು ನೀಡಿದ್ದು, ಸದಸ್ಯರ ಜತೆ ಚರ್ಚಿಸಿ, ಪೋಷಕರಿಗೆ ಹೊರೆಯಾಗದಂತೆ ಶುಲ್ಕ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು 15ರಿಂದ 20%ವರೆಗೆ ಶುಲ್ಕದಲ್ಲಿ ಏರಿಕೆ ಮಾಡುವ ಸಾಧ್ಯತೆಗಳಿದೆ. ಸರ್ಕಾರದ ನಿಯಮದ ಪ್ರಕಾರ ಖಾಸಗಿ ಶಾಲೆಗಳಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ 15% ಮಾತ್ರ ಶುಲ್ಕವನ್ನು ಹೆಚ್ಚಿಸಲು ಅವಕಾಶವಿದೆ. ಆದರೆ ಪ್ರತಿ ಬಾರಿ ಇದಕ್ಕಿಂತ ಹೆಚ್ಚಿನ ಏರಿಕೆಯನ್ನು ಹಲವು ಶಾಲೆಗಳು ಮಾಡಿದ್ದು, ಈ ಬಾರಿ ಎಷ್ಷು ಪ್ರಮಾಣದಲ್ಲಿ ಶುಲ್ಕ ಏರಿಕೆಯಾಗಲಿದೆ ಎಂಬುದನ್ನು ನೋಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


