ಜೂನ್ 3ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೇ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ.
ಈ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಲವು ವರ್ಷಗಳ ಬಳಿಕ ಹೊಸ ತಂಡವೊಂದು ಚಾಂಪಿಯನ್ ಆಗಿ ಹೊರಹೊಮ್ಮಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದರೆ ವಿವಿಧ ತಂಡಗಳ ಆಟಗಾರರು ವೈಯಕ್ತಿಕವಾಗಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಗುಜರಾತ್ ಟೈಟನ್ಸ್‌ನ ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ಪಡೆದರೆ, ಅದೇ ತಂಡದ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಪಡೆದರು. ಹೀಗೆ ಟೂರ್ನಿಯಲ್ಲಿ ಅತಿಹೆಚ್ಚು ರನ್ ಹಾಗೂ ವಿಕೆಟ್ ಪಡೆದದ್ದು ಮಾತ್ರವಲ್ಲದೇ ದಾಖಲಾದ ಇನ್ನಿತರ ಅಂಶಗಳ ಮಾಹಿತಿಯೂ ಸಹ ಹೊರಬಿದ್ದಿದ್ದು, ಟೂರ್ನಿಯಲ್ಲಿ ಅತಿಕಡಿಮೆ ವೈಡ್ ಹಾಗೂ ನೋಬಾಲ್ ಎಸೆದ ತಂಡಗಳ ವಿವರ ಸಹ ಬಹಿರಂಗವಾಗಿದೆ.
ಅತಿಕಡಿಮೆ ವೈಡ್ ಎಸೆದ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು – 50
ಕೊಲ್ಕತ್ತಾ ನೈಟ್ ರೈಡರ್ಸ್ – 57
ಡೆಲ್ಲಿ ಕ್ಯಾಪಿಟಲ್ಸ್ – 68
ಸನ್‌ರೈಸರ್ಸ್ ಹೈದರಾಬಾದ್ – 69
ಗುಜರಾತ್ ಟೈಟನ್ಸ್ – 81
ಚೆನ್ನೈ ಸೂಪರ್ ಕಿಂಗ್ಸ್ – 82
ಲಕ್ನೋ ಸೂಪರ್ ಜೈಂಟ್ಸ್ – 94
ಮುಂಬೈ ಇಂಡಿಯನ್ಸ್ – 98
ಪಂಜಾಬ್ ಕಿಂಗ್ಸ್ – 99
ರಾಜಸ್ಥಾನ್ ರಾಯಲ್ಸ್ – 119
ಅತಿಕಡಿಮೆ ನೋಬಾಲ್ ಎಸೆದ ತಂಡ
ಗುಜರಾತ್ ಟೈಟನ್ಸ್ – 1
ಲಕ್ನೋ ಸೂಪರ್ ಜೈಂಟ್ಸ್ – 3
ರಾಯಲ್ ಚಾಲೆಂಜರ್ಸ್ ಬೆಂಗಳೂರು – 5
ರಾಜಸ್ಥಾನ್ ರಾಯಲ್ಸ್ – 6
ಕೊಲ್ಕತ್ತಾ ನೈಟ್ ರೈಡರ್ಸ್ – 7
ಪಂಜಾಬ್ ಕಿಂಗ್ಸ್ – 7
ಸನ್‌ರೈಸರ್ಸ್ ಹೈದರಾಬಾದ್ – 8
ಮುಂಬೈ ಇಂಡಿಯನ್ಸ್ – 8
ಚೆನ್ನೈ ಸೂಪರ್ ಕಿಂಗ್ಸ್ – 10
ಡೆಲ್ಲಿ ಕ್ಯಾಪಿಟಲ್ಸ್ – 13
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


