Monday, August 31, 2026
spot_img
More
    spot_img
    HomeTop Storyಕೆಂಗೇರಿ: 2 ಮಕ್ಕಳ ತಾಯಿ ಮೇಲಿನ ಹುಚ್ಚು ಪ್ರೀತಿ; ಓಯೊ ರೂಮ್‌ನಲ್ಲಿ ಬೆತ್ತಲೆಗೊಳಿಸಿ 17 ಬಾರಿ...

    ಕೆಂಗೇರಿ: 2 ಮಕ್ಕಳ ತಾಯಿ ಮೇಲಿನ ಹುಚ್ಚು ಪ್ರೀತಿ; ಓಯೊ ರೂಮ್‌ನಲ್ಲಿ ಬೆತ್ತಲೆಗೊಳಿಸಿ 17 ಬಾರಿ ಚುಚ್ಚಿ ಕೊಲೆ!

    ಕೆಂಗೇರಿ: ಎರಡು ಮಕ್ಕಳ ತಾಯಿಯ ಮೇಲಿನ ಹುಚ್ಚು ಪ್ರೀತಿಗೆ ಪಾಗಲ್‌ ಪ್ರೇಮಿಯೊಬ್ಬ ಬರ್ಬರ ಹತ್ಯೆ ನಡೆಸಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.

    Advertisement

    25 ವರ್ಷದ ಇಂಜಿನಿಯರ್‌ ಯಶಸ್‌ ಕೊಲೆ ಆರೋಪಿಯಾಗಿದ್ದು, 33 ವರ್ಷದ ಹರಿಣಿ ಮೃತ ಮಹಿಳೆ. ಇಬ್ಬರೂ ಸಹ ಕೆಂಗೇರಿ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಯಶಸ್‌ ಸ್ನೇಹಿತರ ಸಂಬಂಧಿಯಾಗಿರುವ ಹರಿಣಿ ಜಾತ್ರೆಯೊಂದರಲ್ಲಿ ಯಶಸ್‌ಗೆ ಪರಿಚಯವಾಗಿ ನಂಬರ್‌ ಬದಲಿಸಿಕೊಂಡಿದ್ದರು.

    ಹೀಗೆ ಶುರುವಾದ ಸ್ನೇಹ ಕಾಮಕ್ಕೆ ತಿರುಗಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇತ್ತ ಯಶಸ್‌ ಹರಿಣಿಯ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದ. ಇಬ್ಬರ ನಡುವೆ ಜಗಳ ನಡೆದಿದ್ದು, ಮಾತನಾಡುವ ಸಲುವಾಗಿ ಸ್ಥಳೀಯ ಓಯೊ ರೂಮಿಗೆ ಕರೆಸಿಕೊಂಡಿದ್ದ. ಬಳಿಕ ಲೈಂಗಿಕ ಕ್ರಿಯೆ ನಡೆಸಿ ಆಕೆಗೆ ನೀನು ನನಗೆ ಸಿಗದ ಮೇಲೆ ಇನ್ಯಾರಿಗೂ ಸಿಗಬಾರದು ಎಂದು ಹೇಳಿ ಆಕೆಯನ್ನು ಹತ್ಯೆಗೈದಿದ್ದಾನೆ.

    ಹರಿಣಿಯನ್ನು ಕೊಲ್ಲಲೆಂದೇ ಚಾಕು ಖರೀದಿಸಿದ್ದ ಯಶಸ್‌ 17 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಮೂಲಕ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಮಾಡಿದ ಕೆಟ್ಟ ಸಂಬಂಧಕ್ಕೆ ಹರಿಣಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading