Friday, August 7, 2026
spot_img
More
    spot_img
    HomeEntertainmentʼಕೆಡಿʼ ಟೀಸರ್‌ ಬಿಡುಗಡೆ; ಧ್ರುವ ಸರ್ಜಾ, ಸಂಜಯ್‌ ದತ್‌ ಕೈಗೂ ಮಚ್ಚು ಕೊಟ್ಟ ಪ್ರೇಮ್

    ʼಕೆಡಿʼ ಟೀಸರ್‌ ಬಿಡುಗಡೆ; ಧ್ರುವ ಸರ್ಜಾ, ಸಂಜಯ್‌ ದತ್‌ ಕೈಗೂ ಮಚ್ಚು ಕೊಟ್ಟ ಪ್ರೇಮ್

    ಜೋಗಿ ಪ್ರೇಮ್‌ ನಿರ್ದೇಶನದ ಮುಂದಿನ ಚಿತ್ರ ʼಕೆಡಿʼ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳನ್ನೂ ಒಂದೇ ವಿಡಿಯೊದಲ್ಲಿ ಒದಗಿಸುವ ಮೂಲಕ ವಿಭಿನ್ನ ಪ್ರಯತ್ನ ಮಾಡಿದೆ.

    Advertisement

    ವೀಕ್ಷಕರು ತಮಗೆ ಬೇಕಾದ ಭಾಷೆಯನ್ನು ಸೆಟ್ಟಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಟೀಸರ್‌ ವೀಕ್ಷಿಸಲು ಲಭ್ಯವಾಗಿದೆ.

    ಇನ್ನು ಟೀಸರ್‌ನಲ್ಲಿ ಚಿತ್ರ 70ರ ದಶಕದಲ್ಲಿ ನಾಯಕ ಹಾಗೂ ಖಳನಾಯಕನ ನಡುವೆ ನಡೆಯುವ ಸೇಡಿನ ಕಾಳಗ ಎಂಬ ಅಂಶವನ್ನು ಕಾಣಬಹುದಾಗಿದೆ. ನಾಯಕ ಹೇಗೆ ಖಳನಾಯಕ ವೈರತ್ವ ಕಟ್ಟಿಕೊಳ್ಳುತ್ತಾನೆ, ಅವರಿಬ್ಬರಿಗೂ ಏನು ಸಂಬಂಧ, ರೌಡಿಸಂಗೆ ಇಳಿದ ನಾಯಕ ನಂತರ ಅದರಲ್ಲಿ ಏನಾಗ್ತಾನೆ ಎಂಬುದು ಚಿತ್ರಕಥೆ ಎಂಬಂತಿದೆ ಟೀಸರ್.‌

    ಇನ್ನು ನಾಯಕನಾಗಿ ಧ್ರುವ ಸರ್ಜಾ ಹಾಗೂ ಖಳನಾಯಕನಾಗಿ ಸಂಜಯ್‌ ದತ್‌ ಮಚ್ಚು ಹಿಡಿದು ಅಬ್ಬರಿಸಿದ್ದು, ರವಿಚಂದ್ರನ್‌ ಹಾಗೂ ರಮೇಶ್‌ ಅರವಿಂದ್‌ ಸಹ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ಮಿಂಚಿದ್ದಾರೆ ಹಾಗೂ ಶಿಲ್ಪಾ ಶೆಟ್ಟಿ ರಾಯಲ್‌ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ.

    ಚಿತ್ರಕ್ಕೆ ಅರ್ಜುನ್‌ ಜನ್ಯಾ ಹಿನ್ನೆಲೆ ಸಂಗೀತ ನೀಡಿದ್ದು, ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ತಯಾರಾಗಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣ: ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading