ಶಿಸ್ತಿನಿಂದ ಇರಿ ಎಂದು ಬುದ್ದಿವಾದ ಹೇಳಿದ ಪ್ರಾಂಶುಪಾಲರನ್ನು ವಿದ್ಯಾರ್ಥಿಗಳು ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಹರಿಯಾಣದ ಹಿಸ್ಸಾರ್‌ನಲ್ಲಿ ನಡೆದಿದೆ.
ಬಾಸ್ ಬಾದ್ ಶಾಪುರ್ ಗ್ರಾಮದ ಕರ್ತಾರ್ ಮೆಮೊರಿಯಲ್ ಸೀನಿಯರ್ ಸೆಕೆಂಡರಿ ಕಾಲೇಜಿನ ಪ್ರಾಂಶುಪಾಲರಾದ ಜಗ್ಬೀರ್ ಸಿಂಗ್ ಅವರನ್ನು ಇಂದು ( ಜುಲೈ 10 ) ಬೆಳಗ್ಗೆ ಕಾಲೇಜಿನ ಆವರಣದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ಇರಿದು ಕೊಂದಿದ್ದಾರೆ.
ಚೂರಿ ಇರಿತಕ್ಕೊಳಗಾದ ಪ್ರಾಂಶುಪಾಲರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಇನ್ನು ಪ್ರಾಂಶುಪಾಲರಿಗೆ ಇರಿದ ನಂತರ ಇಬ್ಬರು ವಿದ್ಯಾರ್ಥಿಗಳು ಓಡಿ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪೈಕಿ ಓರ್ವ ಹತ್ಯೆಗೆ ಬಳಸಿದ್ದ ಚೂರಿಯನ್ನು ಎಸೆಯುವ ದೃಶ್ಯ ಸಹ ಇದೆ.
ಏರ್‌ಇಂಡಿಯಾ ದುರಂತಕ್ಕೆ ಪೈಲಟ್‌ಗಳ ಈ ನಿರ್ಲಕ್ಷ್ಯ ಕಾರಣ ಎಂದ ದಿ ಕರೆಂಟ್ ಏರ್ ಜರ್ನಲ್ ವರದಿ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


