ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಶವಗಳನ್ನು ಹೂಳಲಾಗಿದೆ ಎಂಬ ದೂರಿನನ್ವಯ ಎಸ್‌ಐಟಿ ಶೋಧ ಕಾರ್ಯ ಮುಂದುವರೆದಿದೆ. ನೇತ್ರಾವತಿ ತಟದ ಸುತ್ತಾ ಮುತ್ತಾ ಗುರುತಿಸಿದ ಪಾಯಿಂಟ್‌ಗಳಲ್ಲಿ 13ನೇ ಸ್ಥಳವನ್ನು ಬಿಟ್ಟು ಬೇರೆಲ್ಲ ಕಡೆ ಉತ್ಖನನ ಕಾರ್ಯ ಸಂಪೂರ್ಣಗೊಂಡಿದೆ. ಇದೀಗ ದೂರುದಾರ ಬಾಹುಬಲಿ ಪ್ರದೇಶದಲ್ಲಿ ತೋರಿಸಿದ ಕಡೆ ಎಸ್‌ಐಟಿ ತೆರಳಿತ್ತು. ದೂರುದಾರ ಗುರುತಿಸಿದ ಪಾಯಿಂಟ್ ನಂ.16 ರಲ್ಲೂ ಯಾವುದೇ ಮೃತದೇಹದ ಅವಶೇಷಗಳು ದೊರೆತಿಲ್ಲ.
ಬಾಹುಬಲಿ ಮೂರ್ತಿ ಇರುವ ರತ್ನಗಿರಿ ಬೆಟ್ಟದ ಸಮೀಪದಲ್ಲಿ ಮುಸುಕುದಾರಿ ದೂರುದಾರ ಗುರುತಿಸಿದ 16ನೇ ಪಾಯಿಂಟ್ ಉತ್ಖನನ ಕಾರ್ಯ ಮಾಡಲಾಗಿತ್ತು. ಈ ಉತ್ಖನನ ಕಾರ್ಯ ಅಂತ್ಯಗೊಂಡಿದ್ದು,ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಮುಸುಕುದಾರಿ ದೂರುದಾರ ಭೀಮ ಹಾಗೂ ಆತನ ಪರ ವಕೀಲರು ಇದೀಗ ಹೊಸ ಆಕ್ಷೇಪ ತೆಗೆದಿದ್ದಾರೆ. ಸುಜಾತ್ ಭಟ್ ಪರ ವಕೀಲ ಮುಂಜುನಾಥ್ ರತ್ನಗಿರಿ ಭೆಟ್ಟದಲ್ಲಿ ಸಾಕ್ಷಿ ನಾಶ ಮಾಡುವ ಪ್ರಯತ್ನ ನಡೆದಿದೆ. ಕಳೇಬರ ಸಿಗದಂತೆ ಮಾಡಲು ಮಣ್ಣು ಸುರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ದೂರುದಾರ ಗುರುತಿಸಿದ ಪಾಯಿಂಟ್ 16ರಲ್ಲಿ ಎಸ್‌ಐಟಿ ಉತ್ಖನನ ಕಾರ್ಯ ನಡೆಸುತ್ತಿದ್ದಂತೆ ವಕೀಲ ಮಂಜುನಾಥ್ ಭಾರಿ ಅಕ್ಷೇಪ ವ್ಯಕ್ತಪಡಿಸಿದ್ದರು. ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ಹೊಸ ಮಣ್ಣು ಸುರಿದ್ದಾರೆ. ಕಳೇಬರ ಹೂತು ಹಾಕಿದ ಜಾಗದಲ್ಲಿ ಮಣ್ಣು ಸುರಿಯಲಾಗಿದೆ. ಒಳಸಂಚು ನಡೆಸಿ ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಬೇಕಂತಲೇ ಹೊಸ ಮಣ್ಣು ಸುರಿದಿದ್ದಾರೆ ಎಂದು ವಕೀರಲು ಆರೋಪಿಸಿದ್ದಾರೆ.
ವಕೀಲರ ಆರೋಪ, ಮುಸುಕುದಾರಿ ದೂರುದಾರನ ಒತ್ತಾಯದಿಂದ 10 ಅಡಿಗೂ ಹೆಚ್ಚು ಆಳದಷ್ಟು ಮಣ್ಣು ತೆಗೆದು ಉತ್ಖನನ ನಡೆಸಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ.
,ವಿಷ್ಣು ಸಮಾಧಿ ಸ್ಥಳದ ಬಗ್ಗೆ ಸುದೀಪ್ ಮಾತು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


