ಕೇಂದ್ರ ಹೆದ್ದಾರಿ ಸಚಿವಾಲಯವು ಕರ್ನಾಟಕಕ್ಕೆ ಮತ್ತೊಂದು ಭರ್ಜರಿ ಯೋಜನೆ ನಡೆಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಬೆಸೆಯುವ ಪ್ರಮುಖ ಹೆದ್ದಾರಿ ಯೋಜನೆ ಇದಾಗಿದೆ.
ನಿತಿನ್ ಗಡ್ಕರಿ ಅವರು ದಕ್ಷಿಣ ಭಾರತ ಹಾಗೂ ಉತ್ತರ ಭಾರತವನ್ನು ಬೆಸೆಯುವ ಹೊಸ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ನಿರ್ಮಾಣದ ಬಗ್ಗೆ ಘೋಷಣೆ ಮಾಡಿದ್ದಾರೆ. ಬೆಂಗಳೂರು – ಪುಣೆ ಹಾಗೂ ಮುಂಬೈ ಮೂರು ಪ್ರಮುಖ ನಗರಗಳನ್ನು ಈ ಎಕ್ಸ್‌ಪ್ರೆಸ್‌ವೇ ಪ್ರವೇಶಿಸಲಿದೆ.
ಈ ಯೋಜನೆಯನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡುವುದಾಗಿ ಕೇಂದ್ರ ಸರ್ಕಾರವು ಹೇಳಿದೆ. ಈ ಹೊಸ ಹೆದ್ದಾರಿಯಿಂದ ಪ್ರಮುಖ ನಗರಗಳ ನಡುವಿನ ಸಂಚಾರ ಅವಧಿಯು ಬರೋಬ್ಬರಿ ಎರಡು ಪಟ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಈ ಹೆದ್ದಾರಿ ರಸ್ತೆ ದೇಶದ ವಾಣಿಜ್ಯ ವ್ಯವಹಾರಗಳಿಗೆ ಸಹ ಮುಖ್ಯ ರಸ್ತೆ ಆಗಿದೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಮುಂಬೈನ ಅಟಲ್ ಸುರಂಗ ಮಾರ್ಗದಿಂದ ಪುಣೆಯ ರಿಂಗ್ ರೋಡ್ ಮೂಲಕ ಸಾಗುವ ಈ ಹೆದ್ದಾರಿ ರಸ್ತೆಯು ಬೆಂಗಳೂರಿನ ವರೆಗೆ ವಿಸ್ತರಣೆಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಅವರು ಖಚಿತಪಡಿಸಿದ್ದಾರೆ.
,ಟ್ರಂಪ್ ಹೊಸ ಇಂಟೆಲ್ ಸಿಇಒ ಲಿಪ್-ಬು ಟಾನ್ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


