ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಬೆಲೆಯ ಏರಿಳಿತಗಳು ಹೆಚ್ಚಾಗಿದ್ದರೂ, ಚಿನ್ನವನ್ನು ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ, ಗ್ರಾಹಕರು ಚಿನ್ನದ ಬೆಲೆ ಇಳಿಕೆಯಾಗುವುದನ್ನೇ ಕಾಯುತ್ತಿದ್ದು, ಬೆಲೆ ಕುಸಿದ ತಕ್ಷಣ ನಾ ಮುಂದು ತಾ ಮುಂದು ಎಂದು ಖರೀದಿಗೆ ಮುಂದಾಗುತ್ತಿದ್ದಾರೆ.
ಬಹುತೇಕ ಜನರು ಚಿನ್ನವನ್ನು ಕೇವಲ ಆಭರಣಕ್ಕಿಂತ ಹೆಚ್ಚಾಗಿ ಒಂದು ಆಸ್ತಿಯೆಂದು ಪರಿಗಣಿಸಿ ಹೂಡಿಕೆ ಮಾಡುತ್ತಿರುವುದರಿಂದ ಚಿನ್ನದ ಬೆಲೆಗೆ ಬೇಡಿಕೆ ಹೆಚ್ಚಾಗಿದೆ.
ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ, ಒಮ್ಮೆಲೇ ಚಿನ್ನ ಖರೀದಿಸುವುದು ಜನಸಾಮಾನ್ಯರಿಗೆ ಕಷ್ಟವಾಗಿದೆ. ಆದ್ದರಿಂದ, ತಿಂಗಳು ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸಿ ವರ್ಷದ ನಂತರ ಚಿನ್ನವನ್ನು ಖರೀದಿಸುವ ‘ಗೋಲ್ಡ್ ಸ್ಕೀಮ್’ಗಳತ್ತ ಗ್ರಾಹಕರು ಆಸಕ್ತಿ ತೋರಿಸುತ್ತಿದ್ದಾರೆ. ಈ ಮೂಲಕ ಅವರು ಬೆಲೆ ಏರಿಕೆಯ ನಡುವೆಯೂ ಚಿನ್ನವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿದೆ. ಸದ್ಯದ ಚಿನ್ನದ ದರಗಳು ಜನಸಾಮಾನ್ಯರಿಗೆ ಚಿನ್ನ ಖರೀದಿ ಕನಸಾಗಿಯೇ ಉಳಿದಿದೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ಇಂದು ತುಸು ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂ ಚಿನ್ನದ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಹಾಗೆಯೇ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ.
ಇಂದಿನ ಚಿನ್ನದ ದರಗಳು
24 ಕ್ಯಾರೆಟ್ ಚಿನ್ನ
1 ಗ್ರಾಂ: ₹11,051 (ನಿನ್ನೆಯ ದರಕ್ಕಿಂತ ₹21.90 ಏರಿಕೆ)
8 ಗ್ರಾಂ: ₹88,407 (ನಿನ್ನೆಯ ದರಕ್ಕಿಂತ ₹175.20 ಏರಿಕೆ)
10 ಗ್ರಾಂ: ₹1,10,509 (ನಿನ್ನೆಯ ದರಕ್ಕಿಂತ ₹219 ಏರಿಕೆ)
22 ಕ್ಯಾರೆಟ್ ಚಿನ್ನ
1 ಗ್ರಾಂ: ₹10,110 (ನಿನ್ನೆಯ ದರಕ್ಕಿಂತ ₹20 ಏರಿಕೆ)
8 ಗ್ರಾಂ: ₹81,040 (ನಿನ್ನೆಯ ದರಕ್ಕಿಂತ ₹160 ಏರಿಕೆ)
10 ಗ್ರಾಂ: ₹1,01,300 (ನಿನ್ನೆಯ ದರಕ್ಕಿಂತ ₹200 ಏರಿಕೆ)
18 ಕ್ಯಾರೆಟ್ ಚಿನ್ನ
1 ಗ್ರಾಂ: ₹8,288 (ನಿನ್ನೆಯ ದರಕ್ಕಿಂತ ₹16 ಏರಿಕೆ)
8 ಗ್ರಾಂ: ₹66,304 (ನಿನ್ನೆಯ ದರಕ್ಕಿಂತ ₹128 ಏರಿಕೆ)
10 ಗ್ರಾಂ: ₹82,880 (ನಿನ್ನೆಯ ದರಕ್ಕಿಂತ ₹160 ಏರಿಕೆ)
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ (10 ಗ್ರಾಂ) ಚಿನ್ನದ ದರ
ಬೆಂಗಳೂರು: ₹1,01,300
ಮುಂಬೈ: ₹1,01,300
ದೆಹಲಿ: ₹1,01,450
ಚೆನ್ನೈ: ₹1,01,500
ಅಹಮದಾಬಾದ್: ₹1,01,350
ಕೋಲ್ಕತ್ತಾ: ₹1,01,300
ಹೈದರಾಬಾದ್: ₹1,01,300
ವಡೋದರಾ: ₹1,01,350
ಬೆಳ್ಳಿ ದರ
ಬೆಳ್ಳಿ ದರದಲ್ಲಿ ಇಂದು ಇಳಿಕೆ ಕಂಡುಬಂದಿದ್ದು, ಪ್ರಮುಖ ದರಗಳು ಹೀಗಿದೆ:
10 ಗ್ರಾಂ: ₹1,300
100 ಗ್ರಾಂ: ₹13,000
1 ಕೆಜಿ: ₹1,30,000
ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ: ಒಂದೇ ದಿನ ₹1,360 ಜಂಪ್! ಲಕ್ಷ ಮೀರಿದ 22 ಕ್ಯಾರೆಟ್ ದರ!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


