ಬೆಂಗಳೂರು: ಏಷ್ಯಾ ಕ್ರಿಕೆಟ್ ಕೌನ್ಸಿಲ್ ನಡೆಸುವ ಏಷ್ಯಾ ಕಪ್ ( Asia Cup 2025 ) ಟೂರ್ನಮೆಂಟ್ 2025 ನಿನ್ನೆ ( ಸೆಪ್ಟೆಂಬರ್ 9 ) ನಡೆದ ಅಫ್ಘಾನಿಸ್ತಾನ ಹಾಗೂ ಹಾಂಗ್‌ಕಾಂಗ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭಗೊಂಡಿದೆ. ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಪ್ಘಾನಿಸ್ತಾನ 94 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಇಂದು ( ಸೆಪ್ಟೆಂಬರ್ 10 ) ಟೂರ್ನಿಯ ಎರಡನೇ ಪಂದ್ಯ ಜರುಗಲಿದ್ದು, ಭಾರತ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿಂದು ಚೊಚ್ಚಲ ಪಂದ್ಯವನ್ನಾಡಲಿರುವ ಭಾರತ ಕಳೆದ ಬಾರಿ 2023ರಲ್ಲಿ ನಡೆದಿದ್ದ ಏಷ್ಯಾ ಕಪ್ ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಎನಿಸಿಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ಅದರ ಹಿಂದಿನ ಬಾರಿ ಚಾಂಪಿಯನ್ ಆಗಿದ್ದ ತಂಡ. ಹಾಗಾದರೆ 1984ರಲ್ಲಿ ಆರಂಭವಾದ ಏಷ್ಯಾ ಕಪ್‌ನ ಪ್ರತಿ ಆವೃತ್ತಿಯಲ್ಲಿ ಯಾವ ತಂಡ ಗೆಲುವು ಸಾಧಿಸಿದೆ ಎಂಬ ಪಟ್ಟಿ ಮುಂದಿದೆ.
1984 – ಭಾರತ
1986 – ಶ್ರೀಲಂಕಾ
1988 – ಭಾರತ
1991 – ಭಾರತ
1995 – ಭಾರತ
1997 – ಶ್ರೀಲಂಕಾ
2000 – ಪಾಕಿಸ್ತಾನ
2004 – ಶ್ರೀಲಂಕಾ
2008 – ಶ್ರೀಲಂಕಾ
2010 – ಭಾರತ
2012 – ಪಾಕಿಸ್ತಾನ
2014 – ಶ್ರೀಲಂಕಾ
2016 – ಭಾರತ
2018 – ಭಾರತ
2022 – ಶ್ರೀಲಂಕಾ
2023 – ಭಾರತ
ಇಲ್ಲಿಯವರೆಗೂ ನಡೆದಿರುವ 16 ಏಷ್ಯಾ ಕಪ್ ಟೂರ್ನಮೆಂಟ್‌ಗಳ ಪೈಕಿ 8 ಟೂರ್ನಮೆಂಟ್‌ಗಳಲ್ಲಿ ಚಾಂಪಿಯನ್ ಎನಿಸಿಕೊಂಡಿರುವ ಮೂಲಕ ಅತಿಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲೇ ಗತಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


