Tuesday, November 3, 2026
spot_img
More
    spot_img
    HomeLatest newsದೇಶದ ವಿವಿಧೆಡೆ ಸ್ಪೋಟ ನಡೆಸಲು ಮುಂದಾಗಿದ್ದ ಉಗ್ರರ ಸಂಚು ವಿಫಲ; 300 ಕೆಜಿ ಆರ್‌ಡಿಎಕ್ಸ್‌, ರೈಫಲ್‌...

    ದೇಶದ ವಿವಿಧೆಡೆ ಸ್ಪೋಟ ನಡೆಸಲು ಮುಂದಾಗಿದ್ದ ಉಗ್ರರ ಸಂಚು ವಿಫಲ; 300 ಕೆಜಿ ಆರ್‌ಡಿಎಕ್ಸ್‌, ರೈಫಲ್‌ ವಶಕ್ಕೆ

    ಹೊಸದಿಲ್ಲಿ: ದೇಶದ ವಿವಿಧೆಡೆ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಭಯೋತ್ಪಾದಕ ಸಂಚನ್ನು ದೆಹಲಿ ಪೊಲೀಸರು ವಿಫಲಗೊಳಿಸಿದ್ದು, ಹರಿಯಾಣದ ಫರಿದಾಬಾದ್‍ನಲ್ಲಿ 350 ಕೆಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ರೈಫಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಇತ್ತೀಚಿಗೆ ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‍ಗಳನ್ನು ಹಾಕಿದ್ದ ಹಿನ್ನೆಲೆ ಉತ್ತರ ಪ್ರದೇಶದ ಸಹರಾನ್‍ಪುರದಲ್ಲಿ ಕಾಶ್ಮೀರಿ ಮೂಲದ ವೈದ್ಯ ಆದಿಲ್ ಅಹ್ಮದ್ ರಾಥರ್‍ನನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಹರಿಯಾಣದ ಫರಿದಾಬಾದ್‍ನಲ್ಲಿ ಪೊಲೀಸರು 360 ಕೆ.ಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶ್ರೀನಗರದಲ್ಲಿ ಪೋಸ್ಟರ್ ಹಾಕಿದ ಆರೋಪದ ಮೇಲೆ ಬಂಧಿತ ಕಾಶ್ಮೀರಿ ವೈದ್ಯ ಡಾ. ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿಯಂತೆ ಈ ಸ್ಫೋಟಕ ಪತ್ತೆಯಾಗಿದೆ. ಈ ಘಟನೆಯಿಂದಾಗಿ ಉನ್ನತ ಶಿಕ್ಷಣ ಪಡೆದವರೂ ಭಯೋತ್ಪಾದನೆಗೆ ಸೇರುತ್ತಿರುವುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇನ್ನೊಬ್ಬ ಸಂಚುಕೋರನಿಗಾಗಿ ಹುಡುಕಾಟ ನಡೆಸಿದ್ದಾರೆ.

    ಫರಿದಾಬಾದ್ ಪೊಲೀಸ್ ಕಮಿಷನರ್ ಸತೇಂದರ್ ಕುಮಾರ್ ಗುಪ್ತಾ ಅವರ ಮಾಹಿತಿ ಪ್ರಕಾರ, ವಿಚಾರಣೆ ವೇಳೆ ಆರೋಪಿ ವೈದ್ಯ ಸ್ಫೋಟಕಗಳ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾನೆ. ಈ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲ ಮುಜಮ್ಮಿಲ್ ಶಕೀಲ್ ಎಂಬ ಇನ್ನೋರ್ವ ವೈದ್ಯ ಸಂಗ್ರಹಿಸಿದ್ದು, ಆರೋಪಿ ಮುಜಮ್ಮಿಲ್‍ನ್ನು ಸದ್ಯ ಬಂಧಿಸಲಾಗಿದೆ.

    ಈಗಾಗಲೇ ಆರೋಪಿ ರಾಥರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಸದ್ಯ ಈ ಸ್ಫೋಟಕಗಳ ಸಂಗ್ರಹಣೆ, ಸಾಗಾಣೆ ಹಿಂದಿನ ಜಾಲ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ. ಇದು ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದ್ದಾರೆ.

    ಅನಂತ್‍ನಾಗ್ ಸರ್ಕಾರಿ ಕಾಲೇಜುವೊಂದರಲ್ಲಿ ರಾಥರ್ ಲಾಕರ್‍ನಿಂದ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. 2019ರ ಪುಲ್ವಾಮಾ ದಾಳಿಯ ಸಂದರ್ಭದಲ್ಲಿ 80 ಕೆ.ಜಿಯಷ್ಟು ಆರ್‍ಡಿಎಕ್ಸ್ ಬಳಸಿ ಸಿಆರ್‍ಪಿಎಫ್ ಬಸ್ಸನ್ನು ಸ್ಫೋಟಿಸಲಾಗಿತ್ತು.
    ಯಾವೆಲ್ಲಾ ಸ್ಫೋಟಕಗಳು ವಶ ಶಂಕಿತ ಉಗ್ರರಿಂದ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ 350 ಕೆಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ಅಸಾಲ್ಟ್ ರೈಫಲ್‍ಗಳು, ಮತ್ತು ಟೈಮರ್‍ಗಳು ಸೇರಿವೆ.

    ಹರಿಯಾಣದ ಫರಿದಾಬಾದ್‍ನಲ್ಲಿ ಈ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಆದಿಲ್ ಅಹ್ಮದ್ ರಾಥರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಆದಿಲ್ ಅಹ್ಮದ್ ರಾಥರ್ ಎಂಬಾತನನ್ನು ಸಹರಾನ್‍ಪುರದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಫರಿದಾಬಾದ್‍ನಲ್ಲಿ ಈ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಪತ್ತೆಹಚ್ಚಲಾಗಿದೆ.

    ಉನ್ನತ ಶಿಕ್ಷಣ ಪಡೆದವರು ಸಹ ಭಯೋತ್ಪಾದನೆಯತ್ತ
    ಈ ಪ್ರಕರಣದಿಂದಾಗಿ ಭಯೋತ್ಪಾದಕರ ಹೊಸ ವರಸೆಯೊಂದು ಬಯಲಾಗಿದೆ. ವೈದ್ಯನ ಈ ಕೃತ್ಯವು ಭಯೋತ್ಪಾದಕ ಜಾಲಗಳು ಈಗ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ಸಹ ನೇಮಕ ಮಾಡಿಕೊಳ್ಳುತ್ತಿವೆ ಎಂಬುದನ್ನು ಸೂಚಿಸುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರಾಷ್ಟ್ರ ರಾಜಧಾನಿಯ ಇಷ್ಟು ಸಮೀಪದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಏಕೆ ಮತ್ತು ಹೇಗೆ ತರಲಾಗಿದೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಡಾ. ರಾಥರ್ ವಿರುದ್ಧ ಈಗಾಗಲೇ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿ ಡಾ. ಅದೀಲ್, ಅಕ್ಟೋಬರ್ 2024 ರವರೆಗೆ ಜಿಎಂಸಿ ಅನಂತ್‍ನಾಗ್‍ನಲ್ಲಿ ಕೆಲಸ ಮಾಡುತ್ತಿದ್ದ. ಆ ವೇಳೆ ಉಗ್ರರ ಜೊತೆ ತೀವ್ರ ನಂಟು ಹೊಂದಿದ್ದ ಈತನ ಬಳಿ ಎಕೆ 47 ಇತ್ತು.

    ಚಿನ್ನದ ಪ್ರಿಯರಿಗೆ ಶಾಕ್: ಸೋಮವಾರ ಗೋಲ್ಡ್ ರೇಟ್ ₹110 ಜಂಪ್! ಇಂದೇ ದರ ಪರಿಶೀಲಿಸಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search