ನಾಳೆ ( ಡಿಸೆಂಬರ್ 11 ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿಗೆ ಹಬ್ಬದ ದಿನ. ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ದಿ ಡೆವಿಲ್ ಬಿಡುಗಡೆಯ ದಿನ.
ಬೆಂಗಳೂರಿ ಕೆಜಿ ರಸ್ತೆಯ ನರ್ತಕಿ ಸೇರಿ ರಾಜ್ಯದ್ಯಂತ ಬಿಡುಗಡೆಯಾಗುತ್ತಿರುವ ಡೆವಿಲ್ ಚಿತ್ರವನ್ನು ಮೊದಲ ಪ್ರದರ್ಶನದಲ್ಲೇ ವೀಕ್ಷಿಸಲು ಅಭಿಮಾನಿಗಳು ಅದ್ದೂರಿಯಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಅಂತಿಮ ದಿನದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನು ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಸಾರಥಿ ಮಾದರಿಯಲ್ಲಿಯೇ ಡೆವಿಲ್ ಸಹ ಇಂತಹ ಕಠಿಣ ಸನ್ನಿವೇಶದಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ.
ದರ್ಶನ್ ಸಿನಿಮಾ ಪರ ರಿಷಬ್ ಶೆಟ್ಟಿ ಸೇರಿ ಹಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ ಬೆಂಬಲ ನೀಡಿದ್ದು, ಇದೀಗ ಶಿವರಾಜ್‌ಕುಮಾರ್ ಡೆವಿಲ್ ಚಿತ್ರಕ್ಕೆ ಶುಭಕೋರಿದ್ದಾರೆ.
‘ಎಲ್ಲರಿಗೂ ನಮಸ್ಕಾರ. ನಾಳೆ ದರ್ಶನ್ ಅವರ ಡೆವಿಲ್ ಸಿನಿಮಾ ರಿಲೀಸ್ ಆಗ್ತಿದೆ. ಒಳ್ಳೆಯದಾಗಲಿ, ಎಲ್ರೂ ಹೋಗಿ ನೋಡಿ. ಕನ್ನಡ ಸಿನಿಮಾ ನೋಡಿ. ನಮ್ಮ ಅಭಿಮಾನಿಗಳು ಯಾವಾಗಲೂ ಕನ್ನಡ ಸಿನಿಮಾಗೆ ಪ್ರೋತ್ಸಾಹ ಕೊಡ್ತಾ ಇರುತ್ತಾರೆ. ನಾಳೆ ಡಿಸೆಂಬರ್ 11 ಡೆವಿಲ್ ಸಿನಿಮಾ ರಿಲೀಸ್ ಆಗ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ ಡೆವಿಲ್, ಗುಡ್‌ಲಕ್, ಗಾಡ್ ಬ್ಲೆಸ್’ ಎಂದು ಹರಸಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಭಾರತದಲ್ಲಿ ಈರುಳ್ಳಿ, ಮಾಂಸಾಹಾರ ಇಲ್ಲದ ಊಟ! ಮಾತಾ ವೈಷ್ಣೋದೇವಿ ಸನ್ನಿಧಿಯ ಕತ್ರಾದಲ್ಲಿ ಸಂಪೂರ್ಣ ನಿಷೇಧದ ರಹಸ್ಯ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


