ಕನ್ನಡ ಚಲನಚಿತ್ರ ಗೀತೆಗಳ ಕಾಪಿರೈಟ್ ಪ್ರಕರಣಗಳನ್ನು ಹಾಗೂ ಆರೋಪಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಆದರೆ ರಾಪ್ ಹಾಡು ಮತ್ತು ಆಲ್ಬಂ ಹಾಡುಗಳ ವಿಚಾರದಲ್ಲಿ ಇಂತಹ ಆರೋಪ ಕೇಳಿಬಂದಿರಲಿಲ್ಲ ಎಂದರೆ ತಪ್ಪಾಗಲಾರದು.
ಪ್ರೇಕ್ಷಕರು ಈ ಹಾಡು ಈ ಹಾಡಿನಂತಿದೆ ಎಂದದ್ದು ಬಿಟ್ಟರೆ ಹಾಡುಗಾರರು ಕಾಪಿ ಎಂಬ ಆರೋಪ ಮಾಡಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಇದೀಗ ಆಲ್ಬಂ ಹಾಡಿಗೂ ಈ ಕಳಂಕ ಅಂಟಿಕೊಂಡಿದೆ. ಹೌದು, ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದ ಕಾಟನ್ ಕ್ಯಾಂಡಿ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು.
ಈ ಹಾಡು ಕೇಳಿದ್ದ ಪ್ರೇಕ್ಷಕರು ವಿವಾಹ ವಿಚ್ಛೇದನದ ಬಳಿಕ ʼದ ರಿಯಲ್ ಚಂದನ್ ಶೆಟ್ಟಿʼ ವಾಪಸ್ ಬಂದಿದ್ದಾರೆ ಎಂದೆಲ್ಲಾ ಹೊಗಳಿದ್ದರು. ಆದರೆ ಇದೀಗ ಯುವರಾಜ್ ಎಂಬ ಮತ್ತೋರ್ವ ಕನ್ನಡದ ಕಲಾವಿದ ಆರು ವರ್ಷಗಳ ಹಿಂದೆ ಬಿಡುಗಡೆಯಾದ ತನ್ನ ʼವೈ ಬುಲ್ʼ ( Y Bull ) ಎಂಬ ಹಾಡಿನ ಕಾಪಿ ಎಂದು ಆರೋಪಿಸಿದ್ದಾರೆ. ಈ ಮೂಲಕ ಚಂದನ್ ಶೆಟ್ಟಿ ಕೃತಿಚೌರ್ಯದ ಆರೋಪ ಎದುರಿಸುವಂತಾಗಿದೆ. ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಹಾಗೂ ಯುವರಾಜ್ ಕಂಪೋಸ್ ಮಾಡಿರುವ ವೈ ಬುಲ್ ಎರಡೂ ಹಾಡುಗಳ ಲಿಂಕ್ ಮುಂದಿದ್ದು, ಅವುಗಳನ್ನು ವೀಕ್ಷಿಸಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ…
ಯುವರಾಜ್ ಸಂಯೋಜಿಸಿರುವ ವೈ ಬುಲ್ ಪಾರ್ಟಿ ಹಾಡು
ಚಂದನ್ ಶೆಟ್ಟಿ ಸಂಯೋಜಿಸಿರುವ ಕಾಟನ್ ಕ್ಯಾಂಡಿ ಹಾಡು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


