ಕಳೆದ ಭಾನುವಾರ ( ಮಾರ್ಚ್ 9 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಈ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿತು. ಅತ್ತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಆಸೆಯಲ್ಲಿದ್ದ ನ್ಯೂಜಿಲೆಂಡ್ ರನ್ನರ್ ಅಪ್ ಅಗಿ ಹೊರಹೊಮ್ಮಿತು.
ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದರೆ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
ಟೂರ್ನಿ ಮುಕ್ತಾಯವಾದ ಬಳಿಕ ಎಲ್ಲ ತಂಡಗಳಿಗೂ ಅವರವರು ಪಡೆದ ಸ್ಥಾನದ ಆಧಾರದ ಮೇಲೆ ನಗದು ಬಹುಮಾನವನ್ನು ನೀಡಲಾಗಿದೆ. ಆ ಪಟ್ಟಿ ಕೆಳಕಂಡಂತಿದೆ
1. ಭಾರತ – 20.48 ಕೋಟಿ
2. ನ್ಯೂಜಿಲೆಂಡ್ – 10.90 ಕೋಟಿ
3. ದಕ್ಷಿಣ ಆಫ್ರಿಕಾ – 5.32 ಕೋಟಿ
4. ಆಸ್ಟ್ರೇಲಿಯಾ – 5.03 ಕೋಟಿ
5. ಅಫ್ಘಾನಿಸ್ತಾನ – 4.22 ಕೋಟಿ
6. ಬಾಂಗ್ಲಾದೇಶ – 3.94 ಕೋಟಿ
7. ಇಂಗ್ಲೆಂಡ್ – 2.20 ಕೋಟಿ
8. ಪಾಕಿಸ್ತಾನ – 2.20 ಕೋಟಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


