ಬೆಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತಾಗಿ ‘ಧರ್ಮಸ್ಥಳ ಹಾರರ್’ ಎಂಬ ವಿಡಿಯೊ ಮಾಡಿದ್ದ ಸಮೀರ್‌ಗೆ ಇದೀಗ ಸಂಕಷ್ಟ ಎದುರಾಗಿದೆ.
ಮೊದಲಿಗೆ ಸಮೀರ್ ಪ್ರಕರಣದ ಕುರಿತು ಪ್ರಥಮ ವಿಡಿಯೊ ಮಾಡಿದ ಬಳಿಕ ಧರ್ಮಸ್ಥಳ ಗುರಿಯಾಗಿಸಿಕೊಂಡು ವಿಡಿಯೊ ಮಾಡಿದ್ದಕ್ಕೆ ತಡೆ ತರಲಾಗಿತ್ತು. ಹೀಗಾಗಿ ಸಮೀರ್‌ಗೆ ಆ ವಿಡಿಯೊವನ್ನು ತೆಗೆದುಹಾಕುವಂತೆ ಹಾಗೂ ಮುಂದೆ ಈ ಬಗ್ಗೆ ವಿಡಿಯೊ ಮಾಡದಂತೆ ತಡೆಯಾಜ್ಞೆ ನೀಡಲಾಗಿತ್ತು.
ಆದರೂ ಸಹ ಸಮೀರ್ ಎರಡನೇ ವಿಡಿಯೊ ಮಾಡಿದ್ದಕ್ಕೆ ಧರ್ಮಸ್ಥಳದ ಡಿ. ನಿಶ್ಚಲ್ ಹಾಗೂ ಡಿ. ಹರ್ಷೇಂದ್ರ ಕುಮಾರ್ 10 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಸಂಬಂಧ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಸಮೀರ್‌ಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


