ಇಂದು ( ಏಪ್ರಿಲ್ 11 ) ಸಂಪುಟದಲ್ಲಿ ಜಾತಿ ಗಣತಿ ವರದಿ ಮಂಡನೆಯಾಗುವ ಮುನ್ನವೇ ಅದರಲ್ಲಿನ ಅಂಶಗಳು ಸೋರಿಕೆಯಾಗಿವೆ ಎಂಬ ಸುದ್ದಿ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಕಾಂತರಾಜು ತಂಡ ಸಿದ್ಧಪಡಿಸಿರುವ ಈ ಜಾತಿ ಗಣತಿ ವರದಿಯನ್ನು ಸರ್ಕಾರ ಸಾಮಾಜಿಕ – ಆರ್ಥಿಕ ಸಮೀಕ್ಷೆ ಎಂದು ಕರೆದಿದ್ದು, ಟಿವಿ 9 ಸುದ್ದಿ ವಾಹಿನಿ ಈ ವರದಿಯಲ್ಲಿನ ಜಾತಿವಾರು ಜನಸಂಖ್ಯೆ ಮಾಹಿತಿ ಸೋರಿಕೆಯಾಗಿದೆ ಎಂದು ಸುದ್ದಿ ಮಾಡಿದೆ.
ಈ ಸುದ್ದಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ 1.08 ಕೋಟಿ, ಮುಸಲ್ಮಾನ 75 ಲಕ್ಷ, ಲಿಂಗಾಯತ 73 ಲಕ್ಷ, ಒಕ್ಕಲಿಗ 70 ಲಕ್ಷ, ಕುರುಬರು 45 ಲಕ್ಷ, ಪರಿಶಿಷ್ಟ ಪಂಗಡ 42 ಲಕ್ಷ, ಮರಾಠ 16 ಲಕ್ಷ, ವಿಶ್ವಕರ್ಮ 15 ಲಕ್ಷ, ಬ್ರಾಹ್ಮಣ 15 ಲಕ್ಷ, ಬೆಸ್ತರು 14.5 ಲಕ್ಷ, ಈಡಿಗರು 14 ಲಕ್ಷ, ಕ್ರೈಸ್ತರು 12 ಲಕ್ಷ, ಗೊಲ್ಲ (ಯಾದವ) 10.5 ಲಕ್ಷ, ಉಪ್ಪಾರ 7 ಲಕ್ಷ, ಮಡಿವಾಳ 7 ಲಕ್ಷ, ಅರೆ ಅಲೆಮಾರಿ 7 ಲಕ್ಷ, ಕುಂಬಾರ 5 ಲಕ್ಷ, ತಿಗಳರು 5 ಲಕ್ಷ, ಸವಿತಾ ಸಮಾಜ 4.5 ಲಕ್ಷ ಹಾಗೂ ಜೈನರು 3 ಲಕ್ಷ ಎಂದು ತಿಳಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


