Friday, August 7, 2026
spot_img
More
    spot_img
    HomeTop Storyನಮ್ಮ ಸಂಖ್ಯೆ ಕಡಿಮೆ ತೋರಿಸಿದ್ದಾರೆ ಎಂದು ಜಾತಿಗಣತಿ ವರದಿಗೆ ಒಕ್ಕಲಿಗರ ವಿರೋಧ; ಲಿಂಗಾಯತರ ಜೊತೆ ಸೇರಿಕೊಂಡು...

    ನಮ್ಮ ಸಂಖ್ಯೆ ಕಡಿಮೆ ತೋರಿಸಿದ್ದಾರೆ ಎಂದು ಜಾತಿಗಣತಿ ವರದಿಗೆ ಒಕ್ಕಲಿಗರ ವಿರೋಧ; ಲಿಂಗಾಯತರ ಜೊತೆ ಸೇರಿಕೊಂಡು ಹೋರಾಟಕ್ಕೆ ತೀರ್ಮಾನ!

    ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ವರದಿಗೆ ಹತ್ತು ವರ್ಷವಾಗಿರುವ ಹಿನ್ನೆಲೆಯಲ್ಲಿ ವರದಿಗೆ ಇಡೀ ನಮ್ಮ ಜನಾಂಗದ ವಿರೋಧವಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ತಿಳಿಸಿದ್ದಾರೆ.

    Advertisement

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಗಣ್ಯರು ಹಾಗೂ ಶಾಸಕರು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ವೈಜ್ಞಾನಿಕವಾಗಿ ಜಾತಿಜನಗಣತಿ ಮಾಡಬೇಡಿ ಎಂದು ಯಾರೂ ಹೇಳುತ್ತಿಲ್ಲ.ಆದರೆ, ಈ ವರದಿ 10 ವರ್ಷಗಳ ಹಿಂದೆ ಆಗಿರುವುದನ್ನು ಸಂಪುಟ ಸಭೆಯ ಮುಂದೆ ತರಲಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದರು.

    ಈ ವರದಿಗೆ ಲಿಂಗಾಯಿತರು,ಒಕ್ಕಲಿಗರು ಈಗಾಗಲೇ ವಿರೋಧ ಮಾಡಿದ್ದಾರೆ. ಈ ವರದಿಯನ್ನು ಸರ್ಕಾರ ಒಪ್ಪಬಾರದು. ಒಂದು ವೇಳೆ ಅನುಷ್ಠಾನಕ್ಕೆ ತರಲು ಮುಂದಾದರೆ, ನಾವು ಮಾತ್ರ ಸುಮ್ಮನೆ ಕುಳಿತುಕೊಳ್ಳಲ್ಲ. ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹೋರಾಟ ಮಾಡುತ್ತೇವೆ. ರಾಜ್ಯದಾದ್ಯಂತ ಲಿಂಗಾಯತರನ್ನು ನಮ್ಮ ಜೊತೆ ಸೇರಿಸಿಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಲ್ಲ ಜಾತಿಯವರು ಸಹೋದರರಂತೆ ಇರಬೇಕು. ಈ ವರದಿ ಮುಂದೆ ಇಟ್ಟುಕೊಂಡು ಯಾಕೆ ಮುಖ್ಯಮಂತ್ರಿಗಳು ಪದೇ ಪದೇ ಪ್ರಸ್ತಾಪ ಮಾಡುತ್ತಾರೆ? ವೈಜ್ಞಾನಿಕವಾಗಿ ಜಾತಿಗಣತಿಯನ್ನು ಮತ್ತೊಮ್ಮೆ ಮಾಡಲಿ. ಈಗಿರುವ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ.

    ಹತ್ತು ವರ್ಷಗಳ ನಂತರ ವರದಿಯನ್ನು ಸ್ವೀಕರಿಸುವುದು ಎಷ್ಟರಮಟ್ಟಿಗೆ ಸರಿ ಇದೆ? ಅನಂತರ ಬದಲಾವಣೆಯಾಗಿಲ್ಲವೆ? ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಜಾತಿಯಲ್ಲಿ ಜನ ಹುಟ್ಟಿಲ್ಲವೇ? ಜನಸಂಖ್ಯೆ ಜಾಸ್ತಿಯಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ಜಾತಿಜನಗಣತಿ ಮಾಡಿದಾಗ ಒಕ್ಕಲಿಗರಲ್ಲಿ ಸಾಕಷ್ಟು ಉಪಜಾತಿಗಳಿವೆ. ಅವರು ಈ ಜಾತಿ ಅಲ್ಲ , ಬೇರೆ ಜಾತಿ ಅಂತ ಮಾಡಿದ್ದಾರೆ. ಒಕ್ಕಲಿಗರಲ್ಲಿ 115 ಪಂಗಡಗಳಿವೆ, ಅವರೆಲ್ಲರೂ ಒಕ್ಕಲಿಗರೇ. ಅವುಗಳಲ್ಲಿ ಮತ್ತೆ ಉಪಪಂಗಡಗಳಿವೆ. ಅವರನ್ನು ಬೇರೆ ಮಾಡಿ ಒಕ್ಕಲಿಗರು ಕಡಿಮೆ ಇದ್ದಾರೆ ಅಂತ ತೋರಿಸಿದ್ದಾರೆ. ಕಂಪ್ಯೂಟರ್ ಮತ್ತು ಡಿಜಿಟಲ್ ಯುಗದಲ್ಲಿ ಬೇಗ ವರದಿ ಪಡೆಯುವ ಅವಕಾಶವಿದೆ ಎಂದಿದ್ದಾರೆ.

    ಸಮೀಕ್ಷೆ ಮಾಡುವಾಗ ನಮ್ಮ ಮನೆಗೆ ಯಾರೂ ವರದಿ ಮಾಡಲು ಬಂದಿಲ್ಲ. ಮನೆಗೆ ಬಂದು ನಿಮ್ಮ ಮನೆಯಲ್ಲಿ ಎಷ್ಟು ಜನ ಇದೀರಾ? ಯಾವ ಜಾತಿಗೆ ಸೇರಿದವರು ಅಂತ ಯಾರೂ ನಮ್ಮನ್ನು ಪ್ರಶ್ನೆ ಮಾಡಿಲ್ಲ. ಬಹುತೇಕರು ಇದೇ ಮಾತನ್ನು ಹೇಳುತ್ತಿದ್ದಾರೆ. ಪ್ರತಿ ಗ್ರಾಮದ ಮನೆಮನೆಗೆ ಹೋಗಿ ವರದಿ ತಯಾರಿಸಬೇಕು. ಆ ರೀತಿ ಆಗಿಲ್ಲ ಎಂಬ ಆರೋಪಗಳಿವೆ ಎಂದು ಅವರು ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading