ಹೆಸರಾಂತ ರಾಜಕಾರಣಿ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ತಂದೆಯ ಹಾದಿ ಹಿಡಿಯದೇ ಮನರಂಜನೆಯತ್ತ ಮುಖ ಮಾಡಿದ್ದು, ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ಜೂನಿಯರ್ ಇದೇ ತಿಂಗಳ 18ರಂದು ಬಿಡುಗಡೆಯಾಗಲಿದೆ.
ಚಿತ್ರತಂಡ ಇಂದು ( ಜುಲೈ 11 ) ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ತಲುಪುವ ಯತ್ನ ಮಾಡಿದ್ದು, ಟ್ರೈಲರ್ ಸಂಪೂರ್ಣ ಫ್ಯಾಮಿಲಿ ಕಮರ್ಷಿಯಲ್ ಚಿತ್ರ ಎಂಬುದನ್ನು ಅರಿಯಬಹುದಾಗಿದೆ.
ಕಾಲೇಜು ವಿದ್ಯಾರ್ಥಿಯಾಗಿ ಬಳಿಕ ಹೊಸ ಉದ್ಯೋಗಿಯಾಗಿ ಕಾಣಿಸಿಕೊಂಡಿರುವ ಕಿರೀಟಿ ನಟನೆಯಲ್ಲಿ ಮೊದಲ ಚಿತ್ರದ ಹಾಗೆ ಅನಿಸದಷ್ಟು ಚೆನ್ನಾಗಿ ಕೆಲಸ ಮಾಡಿದ್ದು, ಡಾನ್ಸ್ ಹಾಗೂ ಫೈಟ್‌ನಲ್ಲಿ ಸಹ ಉತ್ತಮವಾಗಿದ್ದಾರೆ. ನಾಯಕನ ತಂದೆಯಾಗಿ ರವಿಚಂದ್ರನ್ ಹಾಗೂ ತಾಯಿಯಾಗಿ ಸುಧಾರಾಣಿ ನಟಿಸಿದ್ದಾರೆ.
ಬಡತನದ ಕುಟುಂಬದಲ್ಲಿ ಜನಿಸುವ ನಾಯಕನ ಜೀವನದ ಕಥೆಯನ್ನು ಕಾಲೇಜು ಜೀವನ, ಲವ್, ಕೆಲಸ, ಮಹಿಳಾ ಬಾಸ್ ಜೊತೆ ಪೈಪೋಟಿ ಹೀಗೆ ಹಲವು ಅಂಶಗಳನ್ನು ಹಾಕಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಿದ್ದು, ಮಹಿಳಾ ಬಾಸ್ ಪಾತ್ರದಲ್ಲಿ ಜೆನಿಲಿಯಾ ನಟಿಸಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದ ನಿಶ್ಚಲಾನಂದನಾಥ ಸ್ವಾಮೀಜಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


