ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಅಮೆಜಾನ್(Amazon) ಪ್ರೈಮ್ ಡೇ 2025 ಸೇಲ್ ಅನ್ನು ಘೋಷಣೆ ಮಾಡಿದೆ,ಜುಲೈ 12ರಿಂದ 14ರವರೆಗೆ ಭಾರತದಲ್ಲಿ ನಡೆಯಲಿರುವ ಅಮೆಜಾನ್ ಪ್ರೈಮ್ ಡೇ 2025 ಮಾರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮೂರು ದಿನಗಳ ವಿಶೇಷ ಮಾರಾಟದಲ್ಲಿ ಗೃಹೋಪಯೋಗಿ ವಸ್ತುಗಳು, ದಿನಸಿ ಮತ್ತು ಇತರೆ ಅನೇಕ ಉತ್ಪನ್ನಗಳು 60% ವರೆಗೆ ರಿಯಾಯಿತಿಯಲ್ಲಿ ಲಭ್ಯವಾಗಲಿವೆ. ನಿಮ್ಮ ಅಡುಗೆಮನೆಯನ್ನು ಅಪ್‌ಗ್ರೇಡ್ ಮಾಡಲು ಇದು ಅತ್ಯುತ್ತಮ ಅವಕಾಶ.ಪ್ರೈಮ್ ಸದಸ್ಯರು ನೋ ಕಾಸ್ಟ್ ಇಎಂಐ(EMI) ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನೂ ಪಡೆಯಬಹುದು. ಈ ವರ್ಷದ ಪ್ರೈಮ್ ಡೇ (Prime Day 2025 Sale) ಸಿಕ್ಕಾಪಟ್ಟೆ ದೊಡ್ಡದಾಗಿರುತ್ತದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳಲ್ಲಿ ಜಬರದಸ್ತ್ ಉಳಿತಾಯ ಮಾಡುವ ಅವಕಾಶವಾಗಿದೆ.

ಈ ಮಾರಾಟದಲ್ಲಿ ಗ್ರೈಂಡರ್, ವಾಟರ್ ಪ್ಯೂರಿಫೈಯರ್, ಫ್ಯಾನ್ ಮತ್ತು ಇನ್ನೂ ಅನೇಕ ಗೃಹೋಪಯೋಗಿ ವಸ್ತುಗಳು ಅಗ್ಗದ ಬೆಲೆಗೆ ಸಿಗಲಿವೆ. ಉದಾಹರಣೆಗೆ, ಆಟಂಬರ್ಗ್ ಇಂಟೆಲ್ಲನ್, ಆಟಂಬರ್ಗ್ ಆಲ್ಥಿಯಾ ಕೋಲ್ಡ್ ಪ್ರೆಸ್ ಜ್ಯೂಸರ್, ಬಟರ್‌ಫ್ಲೈ ಜಿಯೆರಾಬ್ಲಾಕ್ 1000 ವ್ಯಾಟ್ ಮಿಕ್ಸರ್ ಗ್ರೈಂಡರ್, INALSA ಡ್ಯುರೋನಿಕ್ 650 ವ್ಯಾಟ್ ಸೆಂಟ್ರಿಫ್ಯೂಗಲ್ ಜ್ಯೂಸರ್, ಬಟರ್‌ಫ್ಲೈ ಆರ್ಕಿಡ್ ಪ್ಲಸ್ 2ಲೀ ಟಿಲ್ಟಿಂಗ್ ವೆಟ್ ಗ್ರೈಂಡರ್ ಮುಂತಾದವುಗಳ ಮೇಲೆ ಭಾರೀ ರಿಯಾಯಿತಿ ಇದೆ.ಇದೇ ಮೊದಲ ಬಾರಿಗೆ ಈ ವರ್ಷ 3 ದಿನಗಳವರೆಗೆ ಸೇಲ್ ನಡೆಯಲಿದೆ. ಈ ಮಾರಾಟವು ಪ್ರೈಮ್ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ. ಈ ಬಾರಿ 400 ಕ್ಕೂ ಹೆಚ್ಚು ಉನ್ನತ ಬ್ರ್ಯಾಂಡ್‌ಗಳು 1,600 ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತವೆ ಎಂದು ಅಮೆಜಾನ್ ಕಂಪನಿ ಮಾಹಿತಿಯನ್ನು ತಿಳಿಸಿದೆ.
ಜುಲೈ 12 ಮಧ್ಯರಾತ್ರಿ 12 ಗಂಟೆಯಿಂದ ಜುಲೈ 14 ರ ರಾತ್ರಿ 11:59 ರವರೆಗೆ ಈ ಮಾರಾಟ ನಡೆಯಲಿದೆ. ಈ ವಿಶೇಷ ಡೀಲ್‌ಗಳು ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿದ್ದು, ಸಾಮಾನ್ಯ ಬಳಕೆದಾರರಿಗೆ ಈ ಕೊಡುಗೆಗಳು ಸಿಗುವುದಿಲ್ಲ. SBI ಮತ್ತು ICICI ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.ಮಾರಾಟದಲ್ಲಿ ಖರೀದಿಸಿದ ಎಲ್ಲಾ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಆಗುವುದು, ಇದರಿಂದ ಖರೀದಿ ಅನುಭವ ಮತ್ತಷ್ಟು ಸುಲಭವಾಗುತ್ತದೆ.ಇದು ಗೃಹೋಪಯೋಗಿ ವಸ್ತುಗಳ ಖರೀದಿಗೆ ಅತ್ಯುತ್ತಮ ಸಮಯವಾಗಿದೆ. ಇನ್ನೆರಡು ದಿನ ಕಾಯಿರಿ, ಮತ್ತು ಅಮೆಜಾನ್ ಪ್ರೈಮ್ ಡೇ 2025 ಮಾರಾಟದಲ್ಲಿ ನಿಮ್ಮ ಅಗತ್ಯಗಳಿಗಾಗಿ ಅತ್ಯುತ್ತಮ ಡೀಲ್‌ಗಳನ್ನು ಪಡೆಯಿರಿ.
ಪ್ರಧಾನ ಮಂತ್ರಿ ಜನ ಧನ್ ಯೋಜನೆ: ಸಂಪೂರ್ಣ ಮಾಹಿತಿ, ಲಾಭಗಳು ಮತ್ತು ಅರ್ಹತೆಗಳು
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


