ಯಲ್ಲಾಪುರ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ‘ಕಾಮಿಡಿ ಕಿಲಾಡಿ’ ಖ್ಯಾತಿಯ ಚಂದ್ರಶೇಖರ ಸಿದ್ದಿ ಅವರಿಗೆ ಕುಟುಂಬದವರೇ ಥಳಿಸಿದ ವಿಡಿಯೋ ಹೊರಬಿದ್ದಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಂದ್ರಶೇಖರ್ ಮೃತಪಟ್ಟು 10 ದಿನಗಳ ನಂತರ, ಮೂರು ತಿಂಗಳ ಹಳೆಯದು ಎನ್ನಲಾದ ವಿಡಿಯೋ ಹರಿಬಿಡಲಾಗಿದೆ.
ಇದರಲ್ಲಿ ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಬಡಿಗೆ ಹಿಡಿದು ಥಳಿಸಿದ್ದಾರೆ. ಅಲ್ಲಿದ್ದ ಮತ್ತಿಬ್ಬರು ಸಹ ಸಿದ್ದಿಗೆ ಹೊಡೆದಿದ್ದು, ಇನ್ನೊಬ್ಬ ವ್ಯಕ್ತಿ ‘ಹೊಡೆಯಬೇಡಿ’ ಎನ್ನುತ್ತಿರುವ ಮಾತುಗಳು ಸೆರೆಯಾಗಿವೆ. ಸೋಫಾ ಮೇಲೆ ಚಂದ್ರಶೇಖರ ಸಿದ್ದಿ ಕುಳಿತಿದ್ದಾಗ ಎಲ್ಲರೂ ಒಮ್ಮೆಲೇ ಮುಗಿ ಬಿದ್ದಿದ್ದಾರೆ.
ಜುಲೈ 31ರಂದು ಚಂದ್ರಶೇಖರ ಸಿದ್ದಿ ಅವರು ಅಂಗನವಾಡಿಗೆ ಹೋಗಿದ್ದ ಮಗನನ್ನು ಮನೆಗೆ ಕರೆತಂದಿದ್ದರು. ನಂತರ ಬೆಟ್ಟಕ್ಕೆ ಹೋಗಿದ್ದ ಅವರು ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಕಲಾಸಿಪಾಳ್ಯನಲ್ಲಿ ಸ್ಫೋಟಕ ಪತ್ತೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


