ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ತೆರೆಗೆ ಬರಲಿದೆ.ಸಿನಿಮಾ ಭಾರೀ ನಿರೀಕ್ಷೆ ಮೂಡಿದೆ. ಅಭಿಮಾನಿಗಳು ಚಿತ್ರ ನೋಡಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಚಿತ್ರದ ಬುಕ್ಕಿಂಗ್ ಶುರುವಾಗುತ್ತಿದ್ದಂತೆಯೇ ಮುಗಿ ಬಿದ್ದು ಟಿಕೆಟ್ ಖರೀದಿ ಮಾಡುತ್ತಾರೆ. ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಕೂಲಿ ಮುನ್ನಡೆ ಸಾಧಿಸಿದೆ.
ತಮಿಳುನಾಡಿನ ಕಂಪನಿಯೊಂದು ತನ್ನ ಸಿಬ್ಬಂದಿಗೆ ರಜೆ ಕೊಟ್ಟು ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದು ಹೇಳಿದೆ. ಮಧುರೈನ ಯುಎನ್ ಅಕ್ವಾ ಕೇರ್ – ಆರ್ಒ ಸಿಸ್ಟಮ್ಸ್ ಮತ್ತು ಸೇಲ್ಸ್ ಕಂಪನಿಯು ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ಕೂಲಿ ಸಿನಿಮಾ ನೋಡುವ ಸಲುವಾಗಿ ಆ ದಿನ ತನ್ನ ಎಲ್ಲಾ ಉದ್ಯೋಗಿಗಳಿಗೆ ರಜೆ ನೀಡಿ, ಸಿನಿಮಾ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. ಜತೆಗೆ ಉಚಿತ ಟಿಕೆಟ್ಗಳನ್ನು ಒದಗಿಸಲು ಮುಂದಾಗಿದೆ.
ಈ ಚಿತ್ರದಲ್ಲಿ ಕೇವಲ ರಜಿನಿಕಾಂತ್ ಮಾತ್ರವಲ್ಲ ಬದಲಿಗೆ ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್, ಕೂಡ ಇದ್ದಾರೆ. ಹೀಗಾಗಿ ಈ ಚಿತ್ರದ ಸುತ್ತ ಮುತ್ತ ಸಾಕಷ್ಟು ಕುತೂಹಲ ಪ್ರೇಕ್ಷಕರಲ್ಲಿದೆ.
”ಕೂಲಿ” ಚಿತ್ರವನ್ನು ಮೊದಲು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಕನ್ನಡಿಗರಿಗೆ ಸಿಗಲಿದೆ. ಯಾಕೆಂದರೆ ಕರ್ನಾಟಕದಲ್ಲಿ ಹಲವಡೆ ಬೆಳ್ಳಗ್ಗೆ 6ಕ್ಕೆ ಚಿತ್ರದ ಪ್ರದರ್ಶನ ಶುರುವಾಗಲಿದೆ. ಆದರೆ ತಮಿಳುನಾಡಿನಲ್ಲಿ ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 9ರಿಂದ ಆರಂಭವಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


