Tuesday, November 3, 2026
spot_img
More
    spot_img
    HomeEntertainmentಇಷ್ಟು ದಿನ ಏನ್‌ ನಿದ್ರೆ ಮಾಡ್ತಿದ್ರಾ?; ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ ಸೊಸೆ ಬಗ್ಗೆ ಎಸ್‌...

    ಇಷ್ಟು ದಿನ ಏನ್‌ ನಿದ್ರೆ ಮಾಡ್ತಿದ್ರಾ?; ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ ಸೊಸೆ ಬಗ್ಗೆ ಎಸ್‌ ನಾರಾಯಣ್‌ ಫಸ್ಟ್‌ ರಿಯಾಕ್ಷನ್‌

    ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಎಸ್.ನಾರಾಯಣ್‌ ಹಾಗೂ ಅವರ ಕುಟುಂಬದ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇರೆಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಬಗ್ಗೆ ಎಸ್.ನಾರಾಯಣ್‌ ಸೊಸೆ ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ. ಕಳೆದ 2021ರಲ್ಲಿ ಎಸ್‌.ನಾರಾಯಣ್‌ ಪುತ್ರ ಪವನ್‌ ಹಾಗೂ ಪವಿತ್ರ ಮದುವೆ ಆಗಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ ನಾರಾಯಣ್‌ ದೇಶದಲ್ಲಿ ಸೊಸೆಯರನ್ನು ತರುವ ಪ್ರತಿಯೊಬ್ಬ ಪೋಷಕರೂ ಸಹ ಇದನ್ನು ಎದುರಿಸುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು. ಅಲ್ಲದೇ ಪ್ರಕರಣ ದಾಖಲಿಸುವುದರಲ್ಲಿ ಆ ಹುಡುಗಿಗೆ ಏನೋ ಸಣ್ಣ ಸಂತೋಷ ಸಿಗಬಹುದು, ಸಿಗಲಿಬಿಡಿ ಎಂದರು.

    ಆ ಹುಡುಗಿ ಮನೆಬಿಟ್ಟು ಹೋಗಿ 14 ತಿಂಗಳಾಗಿದೆ. ಇಷ್ಟು ಸಮಯದ ಬಳಿಕ ದೂರು ದಾಖಲಿಸಿರುವ ಆಕೆ ಇಷ್ಟು ದಿನಗಳ ಏನು ನಿದ್ರೆ ಮಾಡ್ತಿದ್ರಾ ಎಂದು ಪ್ರಶ್ನಿಸಿದರು. ಅಲ್ಲದೇ ತಮ್ಮ ತಂದೆ 60ರ ದಶಕದ ವರದಕ್ಷಿಣೆ ಪಿಡುಗು ತೊಲಗಬೇಕು ಎಂದು ಹೋರಾಟ ಮಾಡಿದ್ದರು, ತಾನೂ ಸಹ ವರದಕ್ಷಿಣೆ ವಿರುದ್ಧವಾಗಿ ಚಿತ್ರ ಮಾಡಿದವನು, ತಮ್ಮ ಇಡೀ ಪರಂಪರೆಯಲ್ಲಿಯೇ ವರದಕ್ಷಿಣೆಯನ್ನು ಬೆಂಬಲಿಸುವ ಕೆಲಸ ನಡೆದಿಲ್ಲ ಎಂದರು. ಈಗಿನ ಕಾಲದಲ್ಲಿ ಕೆಲ ಹೆಣ್ಣು ಮಕ್ಕಳಿಗೆ ಇದೊಂದು ಅಸ್ತ್ರವಷ್ಟೇ ಎಂದೂ ಸಹ ವ್ಯಂಗ್ಯವಾಡಿದರು. ಇನ್ನು ಪ್ರಕರಣ ನ್ಯಾಯಾಲಯದಲ್ಲಿದ್ದು, ಹೆಚ್ಚಿಗೆ ಮಾತನಾಡಲು ಇಚ್ಛಿಸುವುದಿಲ್ಲ, ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.

    ಸೊಸೆಯ ಆರೋಪವೇನು?
    ನನ್ನ ಮದುವೆ ಅವಧಿಯಲ್ಲಿ 1 ಲಕ್ಷದ ಉಂಗುರ ಹಾಗೂ ಖರ್ಚು ವೆಚ್ಚದ ಹಣ ಪಡೆದಿದ್ದಾರೆ. ನನ್ನ ಪತಿ ಪವನ್‌ ಓದಿರಲಿಲ್ಲ. ಎಲ್ಲಿಯೂ ಕೂಡ ಕೆಲಸ ಸಿಕ್ಕಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆಯ ಸಂಸಾರ ಸಾಗಿಸುತ್ತಿದ್ದೆ. ಇದರ ನಡುವೆ ಫಿಲ್ಮ್‌ ಇನ್ಸ್‌ಸ್ಟಿಟ್ಯೂಟ್‌ ಕೂಡ ಆರಂಭಿಸಲಾಗಿತ್ತು. ಇದನ್ನು ಶುರು ಮಾಡಲು ಪವನ್‌ ನಮ್ಮ ಬಳಿ ಹಣ ಕೇಳಿದ್ದರು. ಆಗ ನಾವು ಒಡವೆಗಳನ್ನು ಅಟ ಇಟ್ಟು ಹಣ ಕೊಟ್ಟಿದ್ದೆವು. ನಂತರ ಸಂಸ್ಥೆ ನಷ್ಟದಲ್ಲಿ ಮುಳುಗಿತು. ಆಗ ನಾವು 10 ಲಕ್ಷ ರೂ ಹಣವನ್ನು ಪವನ್‌ಗೆ ನೀಡಿದ್ದೆವು. ಇದಾದ ನಂತರವೂ ಪವನ್‌ ಹಾಗೂ ಅವರ ತಂದೆ, ತಾಯಿ ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು ಎಂದು ಪವಿತ್ರ ಗಂಭೀರ ಆರೋಪ ಮಾಡಿದ್ದಾರೆ.

    ವರದಕ್ಷಿಣೆ ತರುವಂತೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆರೋಪ ಪ್ರಕರಣದಲ್ಲಿ ಪವನ್‌ ಮೊದಲ ಆರೋಪಿಯಾಗಿದ್ದು, ಎಸ್.ನಾರಾಯಣ್‌ ಎರಡನೇ ಆರೋಪಿ ಆಗಿದ್ದಾರೆ.

    3.65 ಲಕ್ಷ ಕಾರ್ಡ್ ರದ್ದು; ಅರ್ಹ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಲು ಸಿಎಂ ಸೂಚನೆ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search