ಬೆಂಗಳೂರು: ಮೈಸೂರಿನಲ್ಲಿ ನಡೆದ 9 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದ ಪ್ರತಾಪ್ ಸಿಂಹ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು.
ಇಂತಹ ಘೋರ ಘಟನೆ ನಿಮ್ಮದೇ ತವರಿನಲ್ಲಿ ನಡೆದಿದ್ದರೂ ಸಹ ಮೈಸೂರಿಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದ ಪ್ರತಾಪ್ ಸಿಂಹ ನಿಮ್ಮ ಮಗ ಯತೀಂದ್ರ ವರ್ಗಾವಣೆಗೆ ಟ್ಯಾಕ್ಸ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಮೈಸೂರಿನ ಕಾಂಗ್ರೆಸ್ ಶಾಸಕರು ಬಿಲ್ಡರ್‌ಗಳ ಬಳಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿ ಸಿದ್ದರಾಮಯ್ಯ ಸರ್ ಇದರ ಬಗ್ಗೆಯೂ ಸ್ವಲ್ಪ ಗಮನಕೊಡಿ ಎಂದಿದ್ದರು.
ಈ ಹೇಳಿಕೆಗೆ ಇದೀಗ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದು ಮೈಸೂರಿನ ಮಾಜಿ ಸಂಸದರಾದ ಮಿಸ್ಟರ್ ಅಯೋಗ್ಯ, ಮಿಸ್ಟರ್ ಅವಿವೇಕಿ, ಮಿಸ್ಟರ್ ಮುಟ್ಟಾಳ ಪ್ರತಾಪ್ ಸಿಂಹ ನಿನ್ನೆ ಏನು ನಮ್ಮ ಸಿದ್ದರಾಮಯ್ಯ ಸಾಹೇಬ್ರ ಬಗ್ಗೆ ಮಾತನಾಡಿದ್ದೀರ, ಸಿದ್ದರಾಮಯ್ಯನವರ ಕಾಲಿನ ಧೂಳಿಗೂ ಸಹ ನೀವು ಸಮ ಇಲ್ಲ ಎಂದರು.
ಅಲ್ಲದೇ ಕಾಂಗ್ರೆಸ್‌ನವರು ಲಂಚ ಪಡೆಯುತ್ತಿದ್ದಾರೆ ಎಂಬುದಕ್ಕೂ ಸಹ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್ ಅದನ್ನು ಮಾತನಾಡುವುದಕ್ಕೂ ಮುನ್ನ ನೀವು ಆರ್ ಅಶೋಕ್ ಟ್ಯಾಕ್ಸ್, ವಿಜಯೇಂದ್ರ ಟ್ಯಾಕ್ಸ್, ಯತ್ನಾಳ್ ಟ್ಯಾಕ್ಸ್, ಬಿಜೆಪಿ ಟ್ಯಾಕ್ಸ್, ಮೋದಿ ಟ್ಯಾಕ್ಸ್ ಬಗ್ಗೆ ಸಹ ಮಾತನಾಡಬೇಕಲ್ವ ಎಂದು ಪ್ರಶ್ನಿಸಿದ್ದರು.
ಇನ್ನು ಯತೀಂದ್ರ ಸಿದ್ದರಾಮಯ್ಯ ಎಂಎಲ್‌ಸಿ ಎಂಬ ಪರಿಜ್ಞಾನ ಇಲ್ವಾ? ಅವರ ಪರಿಮಿತಿಯಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತಾರೆ. ಅವರಿಗೆ ಎಂಎಲ್‌ಸಿ ಸ್ಥಾನ ಸಿಕ್ಕಿರುವುದು ಸಿದ್ದರಾಮಯ್ಯನವರ ಮಗ ಎಂಬ ಕಾರಣಕ್ಕಲ್ಲ, ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಕೊಡುಗೆಗಾಗಿ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.
ಮೈಸೂರಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಸಿದ್ದರಾಮಯ್ಯ ವಿರುದ್ಧ ಯದುವೀರ್ ಕಿಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


