Sunday, November 1, 2026
spot_img
More
    spot_img
    HomeCrimeಕೆಂಪುಕೋಟೆ ಬಳಿ ಸ್ಫೋಟ: ರಸ್ತೆಗೆ ಹಾರಿ ಬಂದ ಕೈ ಡಾ. ಉಮರ್ ನಬಿಯದ್ದು?

    ಕೆಂಪುಕೋಟೆ ಬಳಿ ಸ್ಫೋಟ: ರಸ್ತೆಗೆ ಹಾರಿ ಬಂದ ಕೈ ಡಾ. ಉಮರ್ ನಬಿಯದ್ದು?

    ಫರಿದಾಬಾದ್‌ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಶಕ್ಕೆ ಪಡೆದುಕೊಂಡು ತನಿಖೆ ಆರಂಭಿಸಿದ ಬಳಿಕ ಸೋಮವಾರ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟಗೊಂಡಿದೆ. ಈ ಸ್ಪೋಟದ ಹಿಂದಿರುವ ಮಾಸ್ಟರ್ ಮೈಂಡ್ ಯಾರು? ಎಂದು ಎನ್‌ಐಎ ತನಿಖೆ ಆರಂಭಿಸಿದೆ.

    ಸದ್ಯದ ಮಾಹಿತಿಯಂತೆ ಸ್ಪೋಟಗೊಂಡ ಐ-20 ಕಾರು ಮಧ್ಯಾಹ್ನ 3 ಗಂಟೆಯಿಂದ ಪಾರ್ಕಿಂಗ್ ಲಾಟ್‌ನಲ್ಲಿ ನಿಂತಿತ್ತು. ಸಂಜೆ ರಸ್ತೆಗೆ ಬರುತ್ತಿದ್ದಂತೆಯೇ ಸಿಗ್ನಲ್ ಬಳಿ ಸ್ಪೋಟಗೊಂಡಿದೆ. ಈ ಸ್ಪೋಟದಲ್ಲಿ 9 ಜನರು ಸಾವನ್ನಪ್ಪಿದ್ದಾರೆ, ಹಲವಾರು ಜನರು ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಪೋಟಗೊಂಡ ಕಾರನ್ನು ಓಡುತ್ತಿದ್ದವ ಫರಿದಾಬಾದ್‌ನ ವೈದ್ಯ ಡಾ.ಉಮರ್ ಯು ನಬಿ ಎಂದು ಶಂಕಿಸಲಾಗಿದೆ. ಫರಿದಾಬಾದ್‌ನಲ್ಲಿ ಸ್ಪೋಟಕ ವಶಕ್ಕೆ ಪಡೆದುಕೊಂಡು ತನ್ನ ಸಹಚರರನ್ನು ಬಂಧಿಸಿದ ಬಳಿಕ ಡಾ.ಉಮರ್ ಯು ನಬಿ ಸ್ಪೋಟಕ ತುಂಬಿದ ಕಾರಿನ ಮೂಲಕ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.

    ಸ್ಪೋಟದ ತೀವ್ರತೆಗೆ ಮೃತದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ರಸ್ತೆಯಲ್ಲಿ ಸಿಕ್ಕ ಒಂದು ಕೈ ಕಾರಿನಲ್ಲಿದ್ದ ಡಾ.ಉಮರ್ ಯು ನಬಿಯದ್ದು ಎಂದು ಅಂದಾಜಿಸಲಾಗಿದೆ. ಸಿಗ್ನಲ್ ಬಳಿ ಆತ ಒಂದು ಕೈಯನ್ನು ಕಾರಿನ ಬಾಗಿಲ ಮೇಲೆ ಇಟ್ಟುಕೊಂಡಿದ್ದ ಆಗ ಕಾರು ಸ್ಪೋಟಗೊಂಡಿತ್ತು. ಈಗಾಗಲೇ ಕಾರಿನ ಚಲನವಲನ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹ ಮಾಡಲಾಗುತ್ತಿದೆ.

    ಯಾರು ಡಾ.ಉಮರ್ ಯು ನಬಿ?: ಪುಲ್ವಾಮಾ ಮೂಲದ ಡಾ.ಉಮರ್ ಯು ನಬಿ ಕಾರಿನಲ್ಲಿದ್ದ ಇದ್ದ ಎಂದು ಬಲವಾಗಿ ಶಂಕಿಸಲಾಗಿದೆ. ತನ್ನ ತಂಡ ಸದಸ್ಯರು ಸಿಕ್ಕಿಬಿದ್ದ ಬಳಿಕ ಸಿಟ್ಟಾಗಿದ್ದ ಆತ ಏಕಾಂಗಿಯಾಗಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿ ಪೀಕ್ ಅವರ್‌ನಲ್ಲಿ ದೆಹಲಿಯ ರಸ್ತೆಯಲ್ಲಿ ಕಾರು ಸ್ಪೋಟಿಸಿರಬಹುದು ಎಂದು ಅಂದಾಜಿಸಲಾಗಿದೆ.

    ಸ್ಪೋಟಗೊಂಡ ಕಾರಿನಲ್ಲಿ ಡಾ.ಉಮರ್ ಯು ನಬಿ ಒಬ್ಬನೇ ಇದ್ದ ಎಂಬ ಮಾಹಿತಿಯನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಡಾ.ಉಮರ್ ಯು ನಬಿ ಫರಿದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ.

    ಫೆಬ್ರವರಿ 24, 1989ರಂದು ಜನಿಸಿದ ಆತ, ಸದ್ಯ ಪೊಲೀಸರ ವಶದಲ್ಲಿರುವ ಡಾ.ಆದೀಲ್ ಆಪ್ತ ಸ್ನೇಹಿತ. ಡಾ.ಉಮರ್ ಯು ನಬಿ ತಂದೆ ಶಿಕ್ಷಕರಾಗಿದ್ದರು. ಇಬ್ಬರು ಸಹೋದರರು ಮತ್ತು ಒಬ್ಬಳು ಸಹೋದರಿಯನ್ನು ಆತ ಹೊಂದಿದ್ದಾನೆ.

    ಮೂಲಭೂತವಾದಿಗಳ ಗುಂಪಿನ ಸದಸ್ಯನಾಗಿದ್ದ ಡಾ.ಉಮರ್ ಯು ನಬಿ ಟೆಲಿಗ್ರಾಮ್ ಚಾನಲ್ ಬಳಕೆ ಮಾಡಿಕೊಂಡು ತನ್ನ ಕಾರ್ಯ ಯೋಜನೆಯನ್ನು ರೂಪಿಸುತ್ತಿದ್ದ. ಆದರೆ ಫರಿದಾಬಾದ್‌ನಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾಗಿ ತನ್ನ ತಂಡದ ಸದಸ್ಯರು ಸಿಕ್ಕಿಹಾಕಿಕೊಂಡ ಬಳಿಕ ದೆಹಲಿ ಸ್ಫೋಟವನ್ನು ಡಾ.ಉಮರ್ ಯು ನಬಿ ಏಕಾಂಗಿಯಾಗಿ ನಡೆಸಿದ್ದಾನೆ ಎಂದು ಅಂದಾಜಿಸಲಾಗಿದೆ.

    ಡಾ.ಉಮರ್ ಯು ನಬಿ ಕೈ ರಸ್ತೆಯಲ್ಲಿ ಹಾರಿ ಬಂದು ಬಿದ್ದಿದ್ದು, ಆತನ ಪೋಷಕರ ಡಿಎನ್‌ಎ ಪರೀಕ್ಷೆಯನ್ನು ನಡೆಸಲು ಪೊಲೀಸರು ತಯಾರಿ ನಡೆಸಿದ್ದಾರೆ. ತನಿಖೆಯ ಭಾಗವಾಗಿ ಪೋಷಕರನ್ನು ವಿಚಾರಣೆ ಸಹ ಮಾಡುವ ನಿರೀಕ್ಷೆ ಇದೆ. ಫರಿದಾಬಾದ್ ಸ್ಫೋಟಗಳ ಮೂಲಕ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸಲಾಗಿತ್ತು. ಆದರೆ ಅದು ವಿಫಲವಾದ ಬಳಿಕ ಡಾ.ಉಮರ್ ಯು ನಬಿ ತಾನು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಆತ್ಮಾಹುತಿ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಪೋಟ ಪ್ರಕರಣದ ಕುರಿತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಈಗಾಗಲೇ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರ ಮಾಡಲಾಗಿದೆ. 2 ಎಫ್‌ಐಆರ್ ದಾಖಲು ಮಾಡಿಕೊಂಡು ಎನ್‌ಐಎ ತನಿಖೆ ಕೈಗೊಂಡಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search